ಮಿಸ್ TGPC

ಮಿಸ್ TGPC ಸೀಸನ್-14 : ಆರ್ಯಾ ಆವಧೂತ್ ವಿಜೇತೆ

ಡಿಂಪಲ್ ಮೆಹ್ತಾ ಪ್ರಸ್ತುತಪಡಿಸಿದ ಭಾರತದ ಮಿಸ್ TGPC ಸೀಸನ್-14ರ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ನಾಗ್ಪುರದ ಆರ್ಯಾ ಆವಧೂತ್ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.

ಬೆಂಗಳೂರಿನ ಫೆದರ್ಲೈಟ್ ಇವೋಮಾ ಹೋಟೆಲ್ನಲ್ಲಿ ನಡೆದ ಫಿನಾಲೆಯಲ್ಲಿ ಆರಂಭಿಕವಾಗಿ 73 ಮಂದಿ ಫೈನಲಿಸ್ಟ್ಗಳು ಭಾಗವಹಿಸಿದ್ದರು. ವಿವಿಧ ಹಂತಗಳ ಮೌಲ್ಯಮಾಪನದ ನಂತರ ಅಂತಿಮವಾಗಿ 5 ಮಂದಿ ಪ್ರಶಸ್ತಿ ವಿಜೇತೆಯರನ್ನು ಆಯ್ಕೆ ಮಾಡಲಾಯಿತು.

ದುಬೈ ಮೂಲದ ಉದಿತಿ ಮಲಿಕ್ ಪ್ರಥಮ ರನ್ನರ್-ಅಪ್ ಸ್ಥಾನ ಪಡೆದರು. ಕೊಲ್ಕತ್ತಾದ ರಿದ್ಧಿ ಚುರೋರಿಯಾ ದ್ವಿತೀಯ ರನ್ನರ್-ಅಪ್, ಭಟಿಂಡಾದ ಕರುಣಾ ಗುಲಾಟಿ ತೃತೀಯ ರನ್ನರ್-ಅಪ್ ಹಾಗೂ ಗುರ್ಗಾಂವ್ನ ರಿತಿಕಾ ಕುಮಾರ್ ಚತುರ್ಥ ರನ್ನರ್-ಅಪ್ ಆಗಿ ಆಯ್ಕೆಯಾದರು.

ಮಿಸ್ TGPC

ದಿ ಗ್ರೇಟ್ ಪೇಜಂಟ್ ಕಮ್ಯೂನಿಟಿ (TGPC) ಆಯೋಜಿಸಿದ್ದ ಈ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯು ಆತ್ಮವಿಶ್ವಾಸ, ವ್ಯಕ್ತಿತ್ವ, ಫ್ಯಾಷನ್ ಮತ್ತು ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯಿತು.

ಡಿಂಪಲ್ ಮೆಹ್ತಾ ಪ್ರಸ್ತುತಪಡಿಸಿದ ಫೈನಲ್ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಕಾಕ್ಟೇಲ್ ರೌಂಡ್, ಈವಿನಿಂಗ್ ಗೌನ್ ರೌಂಡ್ ಹಾಗೂ ಇಂಡೋ-ವೆಸ್ಟರ್ನ್ ರೌಂಡ್ ಸೇರಿದಂತೆ ಹಲವು ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸ್ಪರ್ಧಿಗಳ ಸಂವಹನ ಕೌಶಲ್ಯ, ವ್ಯಕ್ತಿತ್ವ, ಬುದ್ಧಿವಂತಿಕೆ, ನಾಯಕತ್ವ ಗುಣಗಳ ಸಂದರ್ಶನ ಮತ್ತು ಪ್ರಶ್ನೋತ್ತರ ಸುತ್ತುಗಳ ಮೂಲಕ ಮೌಲ್ಯಮಾಪನ ಮಾಡಲಾಯಿತು.

ಮಿಸ್ ಮೊಮೊ ಫ್ಯಾಷನ್ ಬ್ರ್ಯಾಂಡ್ ಕಾಕ್ಟೇಲ್ ಮತ್ತು ಈವಿನಿಂಗ್ ಗೌನ್ ಸುತ್ತುಗಳನ್ನು ಪ್ರಾಯೋಜಿಸಿದ್ದರೆ, ಅಮೃತಮಯಾ ಬೈ ಅನಿಶ್ಶಾ ಇಂಡೋ-ವೆಸ್ಟರ್ನ್ ವಿಭಾಗಕ್ಕೆ ಪ್ರಾಯೋಜಕತ್ವ ನೀಡಿತ್ತು.

ಮಿಸ್ TGPC

ಅಂತಿಮ ಸುತ್ತಿನ ತೀರ್ಪುಗಾರರಾಗಿ ಜಪಾನ್ನ ಮಿಸೆಸ್ ಯುನಿಟಿ ವರ್ಲ್ಡ್ 2025 ಯುಕಿ ಮತ್ಸುದಾ, ಮಿಸೆಸ್ ವರ್ಲ್ಡ್ 2022 ಸರ್ಗಂ ಕೌಶಲ್, ಎಲಿವಿಟ್ಟಾ ಮಿಸೆಸ್ ಇಂಡಿಯಾ ವರ್ಲ್ಡ್ 2025 ರಿನಿಮಾ ಬೋರಾ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ತನ್ವಿ ಖರೋಟೆ ನಿರ್ದೇಶಿಸಿದ್ದರು, ಅವಂತಿ ಶ್ರಾಫ್ ಮತ್ತು ಗೀತಿಕಾ ಜಮ್ಮುಲಾ ನಿರೂಪಿಸಿದರು. ಪೇಜಂಟ್ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜೇತೆಯರಿಗೆ ನಿಹಾಲ್ ಠಾಕೂರ್ ಸ್ಟುಡಿಯೋ ವತಿಯಿಂದ ವಿಶೇಷ ಪೋರ್ಟ್ಫೋಲಿಯೊ ಮತ್ತು ಫ್ಯಾಷನ್ ಫೋಟೋಶೂಟ್ಗಳ ಅವಕಾಶ, ಮಾರ್ಗದರ್ಶನ, ತರಬೇತಿ, ಪ್ರಾಯೋಜಕತ್ವ, ಮಾಧ್ಯಮ ಪ್ರಚಾರ, ವೃತ್ತಿಪರ ಬೆಳವಣಿಗೆಗೆ ನೆರವಾಗುವ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಪ್ರತಿಯೊಬ್ಬ ವಿಜೇತೆಗೂ ಸುಮಾರು ₹5 ಲಕ್ಷ ಮೌಲ್ಯದ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ದೀಪಕ್ ಶಾಹಿ ಮತ್ತು ಮೋನಿಕಾ ಶಾಹಿ ಸ್ಥಾಪಿಸಿರುವ ದಿ ಗ್ರೇಟ್ ಪೇಜಂಟ್ ಕಮ್ಯೂನಿಟಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪೇಜಂಟ್ ಕ್ಷೇತ್ರದ ಚಟುವಟಿಕೆಗಳು, ಫ್ಯಾಷನ್ ಮತ್ತು ಸೌಂದರ್ಯ ಸ್ಪರ್ಧೆಗಳ ಕುರಿತ ಡಿಜಿಟಲ್ ವೇದಿಕೆಯಾಗಿ ಗುರುತಿಸಿಕೊಂಡಿದೆ. ಭಾರತದ ಮಿಸ್ TGPC ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ.

ಭಾರತೀಯ ಪೇಜಂಟ್ ಕ್ಷೇತ್ರದಲ್ಲಿ ಪ್ರಮುಖ ವೇದಿಕೆಯಾಗಿ ಬೆಳೆಯುತ್ತಿರುವ ಭಾರತದ ಮಿಸ್ TGPC, ಪ್ರತಿ ಸೀಸನ್ನೊಂದಿಗೆ ಯುವತಿಯರಿಗೆ ರಾಷ್ಟ್ರೀಯ ಮಟ್ಟದ ಗುರುತು ಹಾಗೂ ವೃತ್ತಿಪರ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಒದಗಿಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!