‘ಭಾರತ್ ಭಾಗ್ಯ ವಿಧಾತ’ ಟ್ರೇಲರ್ ಬಿಡುಗಡೆ

ಬಾಲಿವುಡ್ ನಟಿ ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ  ‘ಭಾರತ್ ಭಾಗ್ಯ ವಿಧಾತ’ ಸಿನಿಮಾದ ಟ್ರೇಲರ್  ಬಿಡುಗಡೆಯಾಗಿದೆ.

ಮನೋಜ್ ತಪಾಡಿಯಾ ನಿರ್ದೇಶನದ ಈ ಚಿತ್ರ  26/11 ಮುಂಬೈ ಭೀಕರ ಭಯೋತ್ಪಾದನಾ ದಾಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೂರಾರು ರೋಗಿಗಳನ್ನು ರಕ್ಷಿಸಿದ ಮುಂಬೈನ ‘ಕಾಮಾ ಮತ್ತು ಅಲ್ಬ್ಲೆಸ್’ ಆಸ್ಪತ್ರೆಯ  ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ನೈಜ  ಕಥೆಯನ್ನು  ಒಳಗೊಂಡಿದೆ. ಚಿತ್ರದಲ್ಲಿ ಕಂಗನಾ ರಣಾವತ್ ನರ್ಸ್ ಪಾತ್ರವನ್ನು ಮಾಡಿದ್ದಾರೆ.

ಟ್ರೇಲರ್​ನಲ್ಲಿ ಆಸ್ಪತ್ರೆಯೊಳಗೆ ಉಗ್ರರು ನುಗ್ಗಿ ದಾಳಿ ನಡೆಸುತ್ತಿರುವಾಗ ಕಂಗನಾ ಪಾತ್ರ ತನ್ನ ಪ್ರಾಣದ ಹಂಗು ತೊರೆದು ಒಳಗೆ ಸಿಲುಕಿರುವ ರೋಗಿಗಳನ್ನು ರಕ್ಷಿಸಲು ಮುಂದಾಗುತ್ತದೆ.  ನರ್ಸ್‌ಗಳ ಮತ್ತು ವೈದ್ಯಕೀಯ ಸಿಬ್ಬಂದಿಯ ಮಹತ್ವದ ಕೊಡುಗೆಯನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ. ಮುಂಬೈ ದಾಳಿಯ ಕರಾಳ ರಾತ್ರಿಯಲ್ಲಿ ಆಸ್ಪತ್ರೆಯಲ್ಲಿದ್ದ ಸುಮಾರು 400 ರೋಗಿಗಳನ್ನು ಸುರಕ್ಷಿತವಾಗಿ ಕಾಪಾಡಿದ ವೈದ್ಯಕೀಯ ಸಿಬ್ಬಂದಿಗೆ  ಚಿತ್ರದ ಮೂಲಕ ಗೌರವ ಸಲ್ಲಿಸಲಾಗಿದೆ.

‘ಭಾರತ್ ಭಾಗ್ಯ ವಿಧಾತ’ ಚಿತ್ರದಲ್ಲಿ ಕಂಗನಾ ರಣಾವತ್,  ಗಿರಿಜಾ ಓಕ್, ಸ್ಮಿತಾ ತಾಂಬೆ, ಅಮೃತಾ ನಾಮದೇವ್, ಈಶಾ ಡೇ, ಪ್ರಿಯಾ ಬೆರ್ಡೆ, ಆಶಾ ಶೆಲಾರ್, ಸುಹಿತಾ ಥಟ್ಟೆ, ರಸಿಕಾ ಆಗಾಶೆ, ಆದಿತ್ಯ ಮಿಶ್ರಾ, ಜಾಹಿದ್ ಖಾನ್  ಪಾತ್ರವರ್ಗದಲ್ಲಿ ಇದ್ದಾರೆ.  ಸಿನಿಮಾ ಜೂನ್ 12ರಂದು ದೇಶಾದ್ಯಂತ  ಬಿಡುಗಡೆಯಾಗಲಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!