ಜಿಎಸ್ಟಿ ಸುಧಾರಣೆಯಿಂದಾಗಿ ಸಿನಿಮಾ ಟಿಕೆಟ್ಗಳಿಗೆ ಸಂಬಂಧಿಸಿದಂತೆ 100 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಟಿಕೆಟ್ಗಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ. 12 ರಷ್ಟು ತೆರಿಗೆಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಆದರೆ 100 ರೂ. ಗಿಂತ ಹೆಚ್ಚಿನ ಟಿಕೆಟ್ಗಳಿಗೆ ಶೇ. 18ರಷ್ಟು ತೆರಿಗೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕಡಿಮೆ ಬೆಲೆಯ ಟಿಕೆಟ್ಗಳ ಮೇಲಿನ ಶೇ. 7 ರಷ್ಟು ತೆರಿಗೆ ಕಡಿತ ದೇಶದಾದ್ಯಂತ ಸಿಂಗಲ್-ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನವನ್ನು ಅಗ್ಗವಾಗಿಸುವ ನಿರೀಕ್ಷೆಯಿದೆ. ಇದು ಹೆಚ್ಚಿನ ಜನರು ದೊಡ್ಡ ಪರದೆಯತ್ತ ಮರಳಲು ಪ್ರೋತ್ಸಾಹಿಸುತ್ತದೆ. ಇದರಿಂದಾಗಿ ನಿರ್ಮಾಪಕರು ಮತ್ತು ವಿತರಕರಿಂದ ಪ್ರದರ್ಶಕರವರೆಗೆ ಹೆಚ್ಚಿನ ಆದಾಯ ಸಿಗುತ್ತದೆ. ತೆರಿಗೆ ಕಡಿತದಿಂದಾಗಿ ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಹಿಂದೆ ಸರ್ಕಾರವನ್ನು ಶೇ. 5 ರ GST ಸ್ಲ್ಯಾಬ್ ನ್ನು 300 ರೂ.ವರೆಗಿನ ಟಿಕೆಟ್ಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿತ್ತು. ಆ ವಿನಂತಿಯನ್ನು ಜಿಎಸ್ಟಿ ಕೌನ್ಸಿಲ್ ಪರಿಗಣಿಸಿಲ್ಲ. ಇದರಿಂದಾಗಿ ಮಲ್ಟಿಪ್ಲೆಕ್ಸ್ಗಳು ತೆರಿಗೆ ವಿನಾಯಿತಿಯ ವ್ಯಾಪ್ತಿಯಿಂದ ಹೊರಗಿವೆ.
ಚಿತ್ರೋದ್ಯಮ ಕೋವಿಡ್ ನಂತರ ಚಿತ್ರಮಂದಿರಗಳಿಗೆ ಜನರನ್ನು ಕರೆತರಲು ಹೆಣಗಾಡುತ್ತಿರುವ ಈ ಸಮಯದಲ್ಲಿ ಶೇ. 7 ರಷ್ಟು ತೆರಿಗೆ ಕಡಿತದ ಬೆಳವಣಿಗೆ ಸಂಭವಿಸಿದೆ. ವಾರ್ಷಿಕವಾಗಿ 15,000 ಕೋಟಿ ರೂ. ಗೂ ಹೆಚ್ಚು ಗಳಿಸುವ ಈ ಉದ್ಯಮ ಪ್ರೇಕ್ಷಕರು ಅಗ್ಗದಲ್ಲಿ ದೊರೆಯುವ ಪರ್ಯಾಯ ವೀಕ್ಷಣೆಗಳನ್ನು ಆರಿಸಿಕೊಂಡಿದ್ದರಿಂದ ಒಟಿಟಿ ವೇದಿಕೆಗಳು ಮತ್ತು ದೂರದರ್ಶನದಿಂದ ತೀವ್ರ ಸ್ಪರ್ಧೆ ಎದುರಿಸಿದೆ.
—–





Be the first to comment