ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಂಧ್ರ ಸಿಎಂ ವಿರುದ್ಧ ಈ ಹಿಂದೆ ಮಾಡಿರುವ ಟ್ವೀಟ್​ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು, ವರ್ಮಾ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಟಿಡಿಪಿ ಪಕ್ಷದ ಮುಖಂಡ ರಾಮಲಿಂಗಾ ರೆಡ್ಡಿ, ರಾಮ್ ಗೋಪಾಲ್ ವರ್ಮಾ ವಿರುದ್ಧ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅವರ ಪುತ್ರ ಮತ್ತು ಸಚಿವ ನಾರಾ ಲೋಕೇಶ್ ಹಾಗೂ ಅವರ ಸೊಸೆಯ ವಿರುದ್ಧ ಮಾನಹಾನಿಕಾರಕ ಟ್ವೀಟ್​ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಐಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ,  ಚಂದ್ರಬಾಬು ನಾಯ್ಡು ವಿರುದ್ಧ  ಹಲವು ಬಾರಿ ಟ್ವೀಟ್​ಗಳನ್ನು ಮಾಡಿ  ಕಾಲೆಳೆದಿದ್ದಾರೆ, ವ್ಯಂಗ್ಯ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ತೋರಿಸಿ ‘ವ್ಯೂಹಂ’ ಹೆಸರಿನ ಸಿನಿಮಾ  ಮಾಡಿದ್ದಾರೆ. ಈ ಹಿಂದೆ ರಾಮ್ ಗೋಪಾಲ್ ವರ್ಮಾ, ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬದ ಬಗ್ಗೆ ಮಾಡಿರುವ ಟ್ವೀಟ್​ಗಳನ್ನೆಲ್ಲ ಕಲೆ ಹಾಕಿರುವ ಟಿಡಿಪಿ ಮಂಡಲ್ ಪರಿಷತ್ ಕಾರ್ಯದರ್ಶಿ ರಾಮಲಿಂಗಾ ರೆಡ್ಡಿ  ದೂರು ದಾಖಲು ಮಾಡಿದ್ದಾರೆ.

ಈ ಹಿಂದೆ ಟಿಡಿಪಿ ಪಕ್ಷದ ಮುಖಂಡನೊಬ್ಬ, ರಾಮ್ ಗೋಪಾಲ್ ವರ್ಮಾ ತಲೆ ಕಡಿದರೆ ಒಂದು ಕೋಟಿ ಹಣ ಕೊಡುವುದಾಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದ. ಆತನ ವಿರುದ್ಧ ವರ್ಮಾ ದೂರು  ದಾಖಲಿಸಿದ್ದರು. ಈಗ ಟಿಡಿಪಿ ಮುಖಂಡ ರಾಮ್ ಗೋಪಾಲ್  ವರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!