ಕನ್ನಡ ಚಿತ್ರರಂಗ 90 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 15 ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ‘ಸಿನಿ 90’ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ರಜನಿಕಾಂತ್, ಕಮಲಹಾಸನ್, ದಳಪತಿ ವಿಜಯ್ ಅವರನ್ನು ಫಿಲ್ಮ್ ಚೇಂಬರ್ ಆಹ್ವಾನಿಸಲಿದೆ. ಟಾಲಿವುಡ್ ನಿಂದ ಚಿರಂಜೀವಿ, ಪವನ್ ಕಲ್ಯಾಣ್, ವೆಂಕಟೇಶ್ ಗೆ ಆಹ್ವಾನ ನೀಡಲು ನಿರ್ಧರಿಸಲಾಗಿದ್ದು, ಮಾಲಿವುಡ್ ನಲ್ಲಿ ಮಮ್ಮುಟ್ಟಿ, ಮೋಹನ್ ಲಾಲ್, ಜಯರಾಮ್ ಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಫ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುವ ಸಿನಿ 90 ಕಾರ್ಯಕ್ರಮದ ಜವಾಬ್ದಾರಿ ಹೊರಿಸಲು ಫಿಲ್ಮ್ ಚೇಂಬರ್ ಸಿದ್ದತೆ ಮಾಡಿದೆ. ಮುಂದಿನ ವಾರದಿಂದ ಚೇಂಬರ್ ಸಿನಿ 90 ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲಿದೆ.
ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದಾರೆ. ಟಾಲಿವುಡ್, ಕಾಲಿವುಡ್, ಮಾಲಿವುಡ್ ಸ್ಟಾರ್ಸ್ ಸಿನಿ 90 ಗೆ ಸಾಕ್ಷಿಯಾಗಲಿದ್ದಾರೆ.
Be the first to comment