ಸಿನಿಮಾಗಳಿಂದ ದೂರ ಇರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ನಟನೆ ಕಡೆ ಮುಖ ಮಾಡುವುದು ಅನುಮಾನ ಎನ್ನುವ ಸುದ್ದಿ ಹರಿದಾಡಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಅನುಷ್ಕಾ ಸದ್ಯ ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ಅನುಷ್ಕಾ ಮಗಳಿಗೆ ಜನ್ಮ ನೀಡಿದರು. ಮದುವೆ, ಮಗು ಆದ ಬಳಿಕ ಅನುಷ್ಕಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಅನುಷ್ಕಾ ಶರ್ಮಾ, ‘ನಾನು ನಟನೆಯನ್ನು ಆನಂದಿಸುತ್ತೇನೆ. ಆದರೆ ಹೆಚ್ಚು ಸಿನಿಮಾಗಳನ್ನು ಮಾಡಲು ಬಯಸುದಿಲ್ಲ. ವರ್ಷಕ್ಕೆ ಒಂದು ಸಿನಿಮಾ ಮಾಡಲು ಬಯಸುತ್ತೇನೆ. ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು’ ಎಂದು ಹೇಳಿದ್ದಾರೆ.
ಅನುಷ್ಕಾ ಅವರ ಮಾತುಗಳು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಅನುಷ್ಕಾ ನಟನೆಯಿಂದ ದೂರ ಇರುವ ಬಗ್ಗೆ ಸುಳಿವು ನೀಡಿದರೇ ಎನ್ನುವ ಅನುಮಾನ ಕಾಡಿದೆ. ಝೀರೋ ಸಿನಿಮಾ ಬಳಿಕ ಅನುಷ್ಕಾ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ.
ಅನುಷ್ಕಾ ನಟನೆಯ ಚಕ್ದಾ ಎಕ್ಸ್ಪ್ರೆಸ್ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಆದರೆ ಇನ್ನೂ ಸಿನಿಮಾ ರಿಲೀಸ್ ಆಗಿಲ್ಲ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ.
ಈ ಸಿನಿಮಾ ಬಳಿಕ ಅನುಷ್ಕಾ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಮುಂದೆ ಸಿನಿಮಾಗೆ ಸಹಿ ಮಾಡುತ್ತಾರಾ ಅಥವಾ ನಟನೆಯಿಂದ ದೂರ ಸರಿಯುತ್ತಾರಾ ಎಂದು ನೋಡಬೇಕಿದೆ.
Be the first to comment