ಜಡೇಶಾ ಮುಂದಿನ ಸಿನಿಮಾದಲ್ಲಿ ಯುವ

ಜಡೇಶಾ ಕೆ ಹಂಪಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ನಟಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ. 

ಇಬ್ಬರೂ ಈ ಬೆಳವಣಿಗೆಯನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ ಹೊಸ ಯೋಜನೆಗಾಗಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಸ್ಕ್ರಿಪ್ಟ್ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಯುವ ರಾಜ್‌ಕುಮಾರ್  ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.  ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ ‘ಕಾಟೇರ’ ಚಿತ್ರದ ಬರಹಗಾರರಾಗಿ ಜಡೇಶಾ ಮನ್ನಣೆ ಪಡೆದರು. ಈ ಚಿತ್ರ ಗ್ರಾಮೀಣ ಹಿನ್ನೆಲೆ ಮತ್ತು ಭಾವನಾತ್ಮಕ ಕಥೆ ಹೇಳುವ ಮೂಲಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಿದೆ. ಜಡೇಶಾ ಅವರ ‘ರಾಜ ಹಂಸ’, ‘ಜಂಟಲ್‌ಮನ್’, ‘ಗುರು ಶಿಷ್ಯರು’ ಮತ್ತು ‘ಲ್ಯಾಂಡ್‌ಲಾರ್ಡ್’  ಚಲನಚಿತ್ರ ಕಥೆಗಳ ಬರವಣಿಗೆಯ ಶೈಲಿ  ಸಾಮಾಜಿಕ ಮತ್ತು ಭಾವನಾತ್ಮಕ ಸಂಘರ್ಷ ಬೆರೆಸುವಲ್ಲಿ ಹೆಸರುವಾಸಿಯಾಗಿದೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ರಾಜ್‌ಕುಮಾರ್, ನಂತರ ರೋಹಿತ್ ಪದಕಿ ನಿರ್ದೇಶನದ ‘ಎಕ್ಕಾ’ ಚಿತ್ರದಲ್ಲಿ ನಟಿಸಿದರು. ಯುವ ರಾಜ್‌ಕುಮಾರ್ ತಮ್ಮ ಮುಂದಿನ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಯೋಜಿಸುತ್ತಿರುವಂತೆ ತೋರುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!