ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಮಾಡಲು ಕಾಯುತ್ತಿರುವಾಗ ಸಿನಿಮಾ ನಿರ್ಮಾಪಕರು ವಿತರಕರ ಹಣ ಮರಳಿಸಿದ್ದಾರೆ.
ಜನವರಿ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾ ರಾಜಕೀಯ ಕುತಂತ್ರಗಳಿಗೆ ಸಿಲುಕಿ ಇನ್ನೂ ಬಿಡುಗಡೆ ಆಗಿಲ್ಲ. ವಿತರಕರು, ಪ್ರದರ್ಶಕರು ನಿರ್ಮಾಪಕರಿಗೆ ಭಾರಿ ಮೊತ್ತದ ಹಣ ಕೊಟ್ಟು ಸಿನಿಮಾ ಬಿಡುಗಡೆ ಮಾಡಲು ಕಾಯುತ್ತಿರುವಾಗ ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಲಾಗಿತ್ತು. ವಿಜಯ್ ಸೂಚನೆ ಮೇರೆಗೆ ನಿರ್ಮಾಪಕರು ವಿತರಕರ ಹಣ ಮರಳಿಸಿದ್ದಾರೆ ಎನ್ನಲಾಗುತ್ತಿದೆ.
ಕೆವಿಎನ್ ನಿರ್ಮಾಣ ಸಂಸ್ಥೆ ‘ಜನ ನಾಯಗನ್’ ನಿರ್ಮಾಣ ಮಾಡಿದೆ. ಸಿನಿಮಾ ಬಿಡುಗಡೆ ಮುಂದೂಡಿ ತಿಂಗಳು ಕಳೆದರೂ ಸಿನಿಮಾ ಬಿಡುಗಡೆ ಬಗ್ಗೆ ಯಾವುದೇ ಖಾತ್ರಿ ಸಿಗುತ್ತಿಲ್ಲ. ಹೀಗಾಗಿ ವಿತರಕರಿಗೆ ಹಣ ಮರಳಿಸುವಂತೆ ವಿಜಯ್ ನಿರ್ಮಾಪಕರಿಗೆ ಹೇಳಿದ್ದಾರೆ.
‘ಸಿನಿಮಾ ಬಿಡುಗಡೆ ಬಗ್ಗೆ ದಿನಾಂಕ ನಿಗದಿ ಆಗದೇ ಇರುವ ಕಾರಣಕ್ಕಾಗಿ ಚಲನಚಿತ್ರ ವಿತರಕರಿಗೆ ಹಣವನ್ನು ಮರುಪಾವತಿಸಲು ನಿರ್ಧರಿಸಿದ್ದೇವೆ. ಅವರನ್ನು ಕಾಯುವಂತೆ ಮಾಡುವುದು ಅನ್ಯಾಯ ಎಂದು ನಾವು ಭಾವಿಸಿದ್ದೇವೆ. ಆದರೆ ನಾವು ಇನ್ನೂ ಸಂಭವನೀಯ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ ಕೆವಿಎನ್ ನಿರ್ಮಾಣ ಸಂಸ್ಥೆಯ ಬ್ಯುಸಿನೆಸ್ ಹೆಡ್ ಮೋಹಿತ್.
ಕೆವಿಎನ್ ಅವರು ಬಂಡವಾಳ ಹೂಡಿ, ಎಚ್ ವಿನೋದ್ ನಿರ್ದೇಶನ ಮಾಡಿದ್ದ ‘ಜನ ನಾಯಗನ್’ ಅದ್ಧೂರಿಯಾಗಿ ನಿರ್ಮಾಣವಾಗಿತ್ತು. ಜನವರಿ ತಿಂಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಹಿಂದಿನ ದಿನ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಈಗ ವಿಜಯ್ ಸಿಎಂ ಆದರೂ ಈವರೆಗೆ ಸಿನಿಮಾ ಬಿಡುಗಡೆಗೆ ಅನುಮತಿ ದೊರೆತಿಲ್ಲ.
——





Be the first to comment