ಬಟ್ಟೆ ಸುತ್ತಿ ಹೊಡೆದ ನಟ ಯಶ್‌!

‘ಟಾಕ್ಸಿಕ್’ ಚಿತ್ರವನ್ನು ಕಾಂಡೋಮ್ ಜಾಹಿರಾತಿಗೆ ಹೋಲಿಕೆ ಮಾಡಿದ್ದ ಟೀಕಾಕರಿಗೆ ಬಟ್ಟೆ ಸುತ್ತಿ ಹೊಡೆದಿರುವ ನಟ ಯಶ್, ‘ಯಾರಿಗೆ ಯಾವ ಸಿನಿಮಾ ಮಾಡಬೇಕು ಅಂತ ನಮಗೆ ಗೊತ್ತುʼ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ  ʻರಾಮಾಯಣ: ರೈಸ್ ಆಫ್ ಎ ಲೆಜೆಂಡ್ʼ ಟ್ರೈಲರ್‌ ಲಾಂಚ್‌ ಈವೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೆಲವೊಮ್ಮೆ ಗಡಿ ದಾಟಿ, ಪಣಕಿಟ್ಟು ಸೋಲು-ಗೆಲುವು ಮೀರಿ ಪ್ರಯತ್ನಗಳನ್ನ ಮಾಡಬೇಕಾಗುತ್ತೆ. ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತೆ. ಹೆಜ್ಜೆ ಗುರುತಾಗುತ್ತೆ. ಕೆಲವೊಮ್ಮೆ ಮೇಲೆ ಹತ್ತೋರಿಗೆ ಮೆಟ್ಟಿಲು ಆಗುತ್ತೆ. ಆ ಮೆಟ್ಟಿಲು ಕೆತ್ತುವ ಕೆಲಸ  ಪ್ರತಿಯೊಬ್ಬರು ಮಾಡಬೇಕು. ನಿಮ್ಮೆಲ್ಲರ ಜವಾಬ್ದಾರಿ ಅದು ಇದೆ. ನಾನು ನೋಡ್ತಾ ಇದ್ದೇನೆ’ ಎಂದರು.

‘ರಾಮಾಯಣ ಚಿತ್ರ ‘ಕುಟುಂಬ ಸಮೇತ ಮಕ್ಕಳೊಂದಿಗೆ ನೋಡುವ ಚಿತ್ರ. ಯಾವುದಾದರೂ ಒಂದು ಸಿನಿಮಾ ಬಂದಾಗ, ವಿಎಫ್‌ಎಕ್ಸ್‌ ಹಂಗಿದೆ, ಈ ಆಕ್ಟರ್‌ ಹಾಗಿರ್ಬಹುದಿತ್ತು. ಇದೇ ಆಗಿರೋದು ಕಾಲ ಕಾಲದಿಂದಲೂ. ನಾವು ಯಾವತ್ತಾದರೂ ಹೊರಗಡೆ ಹೋಗ್ತೀವಿ ಅಂದಾಗ, ಟೀಕೆಗಳು ಎದುರಾಗುತ್ತವೆ. ಬ್ರಿಟಿಷರು ಮಾಡಿದ್ದು ಇದೇ ಕೆಲಸ. ಡವೈಡ್‌ ಆಂಡ್‌ ರೂಲ್‌ ಅಂತ. ಇಂಟರ್ನಲ್‌ ಫೈಟ್‌ ಮಾಡಿಕೊಂಡು ಕೂತಿದ್ರೆ ನಾವು ಜಗತ್ತಿಗೆ ಯಾವತ್ತೂ ಚಾಲೆಂಜ್‌ ಮಾಡೋಕೆ ಆಗಲ್ಲ. ನಾವು ಏನಾದರೂ ಮಾಡ್ತಿರ್ಬೇಕಾದರೆ ನಾವೆಲ್ಲಾ ಒಂದಾಗಬೇಕು, ಕ್ರ್ಯಾಫ್ಟ್‌ನ ಅರ್ಥ ಮಾಡಿಕೊಂಡು, ಅಪ್ರಿಷಿಯೇಟ್‌ ಮಾಡಬೇಕು” ಎಂದು ಯಶ್  ತಿರುಗೇಟು ನೀಡಿದ್ದಾರೆ.

ಟಾಕ್ಸಿಕ್ ಚಿತ್ರವನ್ನು ನಟಿ ರಿಷಿಕಾ ಸಿಂಗ್, ಬಾಲಿವುಡ್ ವಿಮರ್ಶಕ ಕಮಾಲ್ ಆರ್ ಖಾನ್ ಸೇರಿದಂತೆ ಹಲವರು ಟೀಕಿಸಿದ್ದರು.  ಯಶ್ ಟೀಕಾಕಾರರಿಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನ,  ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.  ಎ.ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!