‘ಕನ್ನಡಿಗರು ತಲೆ ತಗ್ಗಿಸೋಕೆ ಬಿಡಲ್ಲ’ ಎಂದ ಯಶ್

”ಕನ್ನಡಿಗರು  ‘ಟಾಕ್ಸಿಕ್’  ಸಿನಿಮಾವನ್ನು ಹೆಮ್ಮೆಯಿಂದ ನೋಡಬಹುದು. ಕನ್ನಡಿಗರು ತಲೆ ತಗ್ಗಿಸೋಕೆ ನಾವು ಬಿಡಲ್ಲ. ತಲೆ ಎತ್ತಿಕೊಂಡೇ ಓಡಾಡುವ ಹಾಗೆ ಸಿನಿಮಾ ಮಾಡುತ್ತೇವೆ” ಎಂದು ಯಶ್ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ  ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಅನಾವರಣ  ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, “ದಾರಿ ಯಾವುದಾದರೂ ಆಗಬಹುದು, ಆದರೆ ಗುರಿ ಮುಟ್ಟಬೇಕು. ಆ ದಾರಿಯಲ್ಲಿ ಹೋರಾಟ ಇರುತ್ತದೆ. ಹೋರಾಡಿಕೊಂಡೇ ಗುರಿ ಮುಟ್ಟಬೇಕು. ಇಂದಿನ ಯುವಪೀಳಿಗೆಯ ಮನಸ್ಸಿನಲ್ಲಿರುವ ಗೊಂದಲಗಳು ಮತ್ತು ಅವರ ಬದುಕಿನ ಸಂಕೀರ್ಣತೆಗಳಿಗೆ ‘ಟಾಕ್ಸಿಕ್’ ಒಂದು ಪ್ರತಿನಿಧಿಯಾಗಿ ಇರಲಿದೆ” ಎಂದು  ಹೇಳಿದರು.

“ಜನರು ನನಗೆ ಕೊಟ್ಟಿರುವ ಶಕ್ತಿ, ಜವಾಬ್ದಾರಿ, ಪ್ರತಿ ಗೆಲುವು ಎಲ್ಲವೂ ನನಗೆ ಮಹತ್ವದ್ದು. ಪ್ರತಿ ಸಿನಿಮಾ ಹಿಟ್ ಆದಾಗಲೂ ಅದು ಕೇವಲ ನನ್ನ ಗೆಲುವು ಎಂದು ನಾನು ಭಾವಿಸುವುದಿಲ್ಲ. ಇನ್ನಷ್ಟು ಕೆಲಸ ಮಾಡು ಎಂದು ಜನರು ನನಗೆ ನೀಡುವ ಜವಾಬ್ದಾರಿ ಎಂದುಕೊಳ್ಳುತ್ತೇನೆ. ಅದೇ ನಂಬಿಕೆಯಿಂದ ಪ್ರತಿ ಸಿನಿಮಾದಲ್ಲೂ ಕೆಲಸ ಮಾಡುತ್ತಾ ಮುಂದೆ ಸಾಗಿದ್ದೇನೆ. ಪ್ರತಿ ಹಂತದಲ್ಲೂ ನೀವು ನನ್ನನ್ನು ಗೌರವಿಸಿದ್ದೀರಿ” ಎಂದು ಕೃತಜ್ಞತೆ ಸಲ್ಲಿಸಿದರು.

”‘ಟಾಕ್ಸಿಕ್’ ಸಿನಿಮಾ ತಾವು ಈವರೆಗೆ ಪಡೆದಿರುವ ಗೆಲುವಿನ ಪ್ರತೀಕ ಮಾತ್ರವಲ್ಲ. ಇನ್ನೊಂದು ಹೆಜ್ಜೆ ಮುಂದೆ ಸಾಗುವ ಪ್ರಯತ್ನ. ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲಿನ ನಂಬಿಕೆ ಇರಲಿ” ಎಂದು ಮನವಿ ಮಾಡಿದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!