ಮಹೇಶ್ ಬಾಬು ‘ವಾರಣಾಸಿ’ ಫಸ್ಟ್ ಲುಕ್ ಬಿಡುಗಡೆ

ಮಹೇಶ್ ಬಾಬು ಅವರ ‘ವಾರಣಾಸಿ’ ಚಿತ್ರದ  ‘ಫಸ್ಟ್ ಲುಕ್’ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಎಸ್.ಎಸ್. ರಾಜಮೌಳಿ ನಿರ್ದೇಶನದ ಈ   ಸಿನಿಮಾದಲ್ಲಿ ಮಹೇಶ್ ಬಾಬು ‘ರುದ್ರ’ನ ಪಾತ್ರ ಮಾಡಿದ್ದಾರೆ. ನಿರ್ದೇಶಕ ಎಸ್.ಎಸ್. ರಾಜಮೌಳಿ, ತಮ್ಮ ‘ಎಕ್ಸ್’  ಖಾತೆಯಲ್ಲಿ ಈ ಪೋಸ್ಟರ್  ಹಂಚಿಕೊಂಡಿದ್ದಾರೆ. ಇದರಲ್ಲಿ ಮಹೇಶ್ ಬಾಬು ಅರಣ್ಯ ಹಿನ್ನೆಲೆಯಲ್ಲಿ ಬಿದಿರಿನ ತೆಪ್ಪವೊಂದರ ಮೇಲೆ ಮಲಗಿದ್ದಾರೆ.  ಪೋಸ್ಟ್‌ನಲ್ಲಿ ಆಫ್ರಿಕಾದ ಹಿನ್ನೆಲೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಾರಣಾಸಿ ಚಿತ್ರದಲ್ಲಿ  ‘ರುದ್ರ’ನಿಗೆ ಉಗ್ರ ರೂಪವೊಂದೇ ಅಲ್ಲ. ಇನ್ನೂ ಹಲವು ಆಯಾಮಗಳಿವೆ’ ಎಂದು ಶೀರ್ಷಿಕೆಯಲ್ಲಿ ಅವರು ಬರೆದಿದ್ದಾರೆ.

ಮಹೇಶ್ ಬಾಬು ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್  ನಟಿಸಿದ್ದಾರೆ.  ‘ಆರ್‌ಆರ್‌ಆರ್’ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದ ಎಂ.ಎಂ. ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ‘ಶ್ರೀ ದುರ್ಗಾ ಆರ್ಟ್ಸ್’ ಮತ್ತು ‘ಶೋಯಿಂಗ್ ಬಿಸಿನೆಸ್’ ಸಂಸ್ಥೆಗಳು ‘ವಾರಣಾಸಿ’ ನಿರ್ಮಿಸುತ್ತಿವೆ.

2027ರ ಏಪ್ರಿಲ್ 7ರಂದು ಬಿಡುಗಡೆಯಾಗಲಿರುವ ‘ವಾರಣಾಸಿ’ ಚಿತ್ರ, ಜಗತ್ತನ್ನೇ ರಕ್ಷಿಸಬಲ್ಲ ಪ್ರಾಚೀನ ರಹಸ್ಯವೊಂದನ್ನು ಹೊಂದಿರುವ ಕ್ರಿ.ಶ. 512ರ ಸಮುದಾಯವೊಂದರ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಪ್ರಾಚೀನ ವಸ್ತುವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವಾಗ  ದುರಾಸೆಯ ವಿಜ್ಞಾನಿಯೊಬ್ಬ ಪಾರ್ಶ್ವವಾಯುವಿಗೆ ಒಳಗಾಗುವ ಸುತ್ತ ಕಥೆ ಸಾಗುತ್ತದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!