ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರ ಬಿಡುಗಡೆ ಆಗಿದ್ದು, ಇದರ ಬೆನ್ನಲ್ಲೇ ಮುಂದಿನ ಒಂದು ವರ್ಷದಲ್ಲಿ ‘ಕೆಡಿ 2’ ಬರಲಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
“ಮೊದಲು ಬೇರೆ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿ. ಆಮೇಲೆ ಪಾರ್ಟ್ 2 ಬಗ್ಗೆ ಹೇಳುತ್ತೇನೆ. 100% ಈ ಸಿನಿಮಾಗೆ ಪಾರ್ಟ್ 2 ಬರುತ್ತದೆ. ಇದಕ್ಕೆಲ್ಲ ಕೆವಿಎನ್ ಪ್ರೊಡಕ್ಷನ್ಸ್ ಕಾರಣ” ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
“ನಾವು ಈ ಸಿನಿಮಾಗಾಗಿ ತುಂಬ ಕಷ್ಟಪಟ್ಟಿದ್ದೇವೆ. ಯುಎಫ್ಓ ಸಮಸ್ಯೆಯಿಂದ ಬೆಳಗ್ಗೆ ಒಂದು ಶೋ ಸಮಸ್ಯೆ ಆಯಿತು. ಈಗ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ. ಎಲ್ಲರೂ ‘ಕೆಡಿ 2’ ಎನ್ನುತ್ತಿದ್ದಾರೆ. ಇದಕ್ಕೆ ಧನ್ಯವಾದಗಳು. ಅದಕ್ಕೆ ಇನ್ನೊಂದು ವರ್ಷ ಸಮಯ ತೆಗೆದುಕೊಳ್ಳುತ್ತೇನೆ. ಸಿನಿಮಾ ಗೆದ್ದಿದ್ದಕ್ಕೆ ಖುಷಿ ಇದೆ. ಗೀತಕ್ಕ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡರು’ ಎಂದಿದ್ದಾರೆ ಪ್ರೇಮ್.
ಹಲವು ವಿವಾದ, ಸೆನ್ಸಾರ್ ಸಮಸ್ಯೆಯ ನಡುವೆಯೂ ಏಪ್ರಿಲ್ 30ರಂದು ಕೆಡಿ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ.
__





Be the first to comment