ವಿಜಯಂ

‘ವಿಜಯಂ’ ಸಿನಿಮಾ ಮೂಲಕ ಮತ್ತೆ ಒಂದಾದ ‘ಪ್ರೇಮಂ’ ಜೋಡಿ

ಮಲಯಾಳಂ ಸಿನಿಮಾ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಘೋಷಣೆ ಕೊನೆಗೂ ಹೊರ ಬಿದ್ದಿದೆ. 12 ವರ್ಷಗಳ ನಂತರ, ಬ್ಲಾಕ್ಬಸ್ಟರ್ ಜೋಡಿ ಎನಿಸಿಕೊಂಡಿರುವ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಅವರ “ವಿಜಯಂ” ಎಂಬ ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ನೇರಂ ಮತ್ತು ಪ್ರೇಮಂ ಚಿತ್ರದ ಅದ್ಭುತ ಯಶಸ್ಸಿನ ನಂತರ, ಈ ಜೋಡಿ ಮತ್ತೊಮ್ಮೆ ರೋಮಾಂಚಕಾರಿ ಪ್ರಾಜೆಕ್ಟ್ ಗೆ ಕೈಜೋಡಿಸಿದ್ದಾರೆ.

“ವಿಜಯಂ”, ನಿವಿನ್ ಪೌಲಿ ಅವರ 50 ನೇ ಸಿನಿಮಾ. ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳು ಸಮ್ಮುಖದಲ್ಲಿ ಶೀರ್ಷಿಕೆ ವೀಡಿಯೊವನ್ನು ಅನಾವರಣಗೊಳಿಸಲಾಯಿತು. ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವನ್ನು ಆಲ್ಫೋನ್ಸ್ ಪುತ್ರೇನ್ ಬರೆದು, ನಿರ್ದೇಶಿಸುವುದರ ಜೊತೆಗೆ ಸಂಕಲನ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಪೌಲಿ ಜೂನಿಯರ್ ಪಿಕ್ಚರ್ಸ್ ಜೊತೆಗೆ ಸಿನೆಹೋಲಿಕ್ಸ್ ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ನಿರ್ಮಾಣ ಮಾಡುತ್ತಿದ್ದಾರೆ. ವಿಜಯಂ ಚಿತ್ರದ ಹಿನ್ನೆಲೆ ಸಂಗೀತವನ್ನು ಕೇರಳ ಮೂಲದ ಸ್ಟೀವ್ ಕೊಟ್ಟೂರ್ ಸಂಯೋಜಿಸಿದ್ದಾರೆ, ಅವರು ಈ ಹಿಂದೆ ಬ್ಲಾಕ್‌ಬಸ್ಟರ್ ಚಿತ್ರಗಳಾದ ದುರಂಧರ್ ಮತ್ತು ದುರಂಧರ್ 2 ಗಾಗಿ ಸಂಗೀತ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. ಜೊತೆಗೆ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನಿರ್ದೇಶಿಸಿದ ವೆಬ್ ಸರಣಿ ಬಾ*ಡ್ಸ್ ಆಫ್ ಬಾಲಿವುಡ್‌ನಲ್ಲೂ ಕೆಲಸ ಮಾಡಿದ್ದರು. ಸದ್ಯ ಟೈಟಲ್ ಅನೌನ್ಸ್ ಮಾಡಿರುವ ಚಿತ್ರತಂಡ ಮುಂದಿನ‌ ದಿನಗಳಲ್ಲಿ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!