ವೈರಲ್ ಆದ ವಿಜಯ್ ಸಿನಿಮಾದ ಫೋಟೋ

ದಳಪತಿ ವಿಜಯ್ ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ ತನ್ನ ಮೊದಲ ಚುನಾವಣೆಯಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಿಗೇ ವಿಜಯ್ ಅಭಿನಯದ 2024ರ ಬ್ಲಾಕ್‌ಬಸ್ಟರ್ ಚಿತ್ರ The Greatest Of All Time (GOAT)ನ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿನಿಮಾದ ದೃಶ್ಯದಲ್ಲಿ ವಿಜಯ್ ಅವರು “TN 07 CM 2026” ಎಂಬ ನೋಂದಣಿ ಸಂಖ್ಯೆಯ ಕಾರು ಓಡಿಸುತ್ತಿದ್ದಾರೆ. ಈಗ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಹೊಸ್ತಿನಲ್ಲಿದ್ದು ಈ ಸಂಖ್ಯೆ ಹೊಂದಿಕೆಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ಅವರು 2024ರ ಫೆಬ್ರವರಿಯಲ್ಲಿ ತಮಿಳಿಗ ವೆಟ್ರಿ ಕಳಗಂ ಪಕ್ಷವನ್ನು ಆರಂಭಿಸಿದ ಕೆಲ ತಿಂಗಳ ನಂತರ ಈ ಚಿತ್ರ ಬಿಡುಗಡೆಯಾಗಿತ್ತು. ಆಗಲೇ ಅವರು 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಈಗ ಸಿನಿಮಾದ ದೃಶ್ಯದ ನಂಬರ್ ಪ್ಲೇಟ್ ನೋಡಿ ಅನೇಕರು ವಿಜಯ್ ಅವರು ಆಗಲೇ ರಾಜಕೀಯದತ್ತ ಕಣ್ಣು ಹಾಕಿದ್ದರು ಎಂದು ಹೇಳುತ್ತಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಪಡೆದಿದೆ. ಬಹುಮತ 112ಕ್ಕಿಂತ ಸ್ವಲ್ಪ ಹಿಂದೆ ಉಳಿದಿರುವ ಪಕ್ಷ ಈಗ ಕಾಂಗ್ರೆಸ್ ಬೆಂಬಲ ಪಡೆದಿದೆ. ಸಿನಿಮಾ ನಟ ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!