ಸಿಟಿಲೈಟ್ಸ್‌

‘ಸಿಟಿಲೈಟ್ಸ್‌’ ಸಿನಿಮಾದ ‘ಬಾವ ಬಾವ’ ಸಾಂಗ್‌ ರಿಲೀಸ್‌

ದುನಿಯಾ ವಿಜಯ್‌ ನಿರ್ದೇಶನದ ಸಿಟಿಲೈಟ್ಸ್‌ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ.. ಬಾವ ಬಾವ ಅನ್ನೋ ರ್ಯಾಪ್‌ ಹಾಡಿನ ಮೂಲಕ ದುನಿಯಾ ವಿಜಯ್‌ ಮತ್ತೆ ಟ್ರೆಂಡಿ ಸಾಂಗ್‌ ಅನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ… ಇಂದು ಸುದ್ದಿಗೋಷ್ಠಿ ಮಾಡುವ ಮೂಲಕ ಸಿಟಿಲೈಟ್ಸ್‌ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ರು..

ಈ ಹಾಡನ್ನು ಅಂಕಿತ್‌ ಕುಮಾರ್‌ ಬಾವ ಅವರೇ ಬರೆದು ಹಾಡಿದ್ದಾರೆ. ಚರಣ್‌ ರಾಜ್‌ ಹಾಡಿಗೆ ಸಂಗೀತ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಣ್‌ ರಾಜ್‌, ‘ದುನಿಯಾ ವಿಜಯ್‌ ಅವರು ಪ್ರತಿ ಬಾರಿ ಹಾಡು ಇದೇ ರೀತಿ ಬೇಕು ಅನ್ನೋ ಒಂದಷ್ಟು ವಿಚಾರಗಳನ್ನ ಇಟ್ಟುಕೊಂಡೆ ಬಂದಿರುತ್ತಾರೆ ಅದು ನನಗೆ ಸಹಾಯವಾಗುತ್ತೆ’ ಎಂದರು..

ಹಾಡನ್ನ ಬರೆದು ಹಾಡಿರೋ ಅಂಕಿತ್‌ ಕುಮಾರ್‌ ಬಾವ ಮಾತನಾಡಿ ‘ನನ್ನ ಹಳೆ ಹಾಡುಗಳನ್ನ ನೋಡಿ ನಮ್ಮ ತಂಡವನ್ನ ಕರೆಸಿ ಅವಕಾಶ ಕೊಟ್ರು.. ವಿಜಿ ಸರ್‌ ಅವಕಾಶ ಕೊಡ್ತಾರೆ ಅಂತ ಯಾವತ್ತು ಅನ್ಕೊಂಡಿರಲಿಲ್ಲ’ ಎಂದರು.

ಇನ್ನು ನಟ ವಿನಯ್‌ ರಾಜ್‌ ಕುಮಾರ್‌ ಮಾತನಾಡಿ ‘ಚರಣ್‌ ಸರ್‌ ಗೆ ಒಂದು ಒಳ್ಳೆ ಸಾಂಗ್‌ ಕೊಡಿ ಅಂತ ಕೇಳಿದ್ದೆ ಆದರೆ ಅವರು ಐದು ಹಾಡುಗಳನ್ನ ಕೊಟ್ಟಿದ್ದಾರೆ ಖುಷಿ ಆಗ್ತಿದೆ’ ಎಂದರು.

ಸಿಟಿಲೈಟ್ಸ್‌

ಇನ್ನು ನಟಿ ಮೋನಿಷಾ ವಿಜಯ್‌ ಕುಮಾರ್‌ ಮಾತನಾಡಿ ವಿನಯ್‌ ರಾಜ್‌ ಕುಮಾರ್‌ ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ತುಂಬಾ ವಿಚಾರಗಳನ್ನ ಕಲಿತಿದ್ದೇನೆ’ ಎಂದರು..

ನಟ ನಿರ್ದೇಶಕ ವಿಜಯ್‌ ಕುಮಾರ್‌ ಮಾತನಾಡಿ ‘ ರ್ಯಾಪ್‌ ಹಾಡು ಯಾವಾಗಲು ಕಷ್ಟಗಳನ್ನ ಹೇಳಿಕೊಳ್ಳಲು ಬಳಸುವ ಹಾಡಾಗಿದೆ. ಸಿಟಿಲೈಟ್ಸ್‌ ನಲ್ಲಿ ನೋವು ಎನ್ನಿಸೋ ವಿಚಾರವನ್ನ ಹೇಳಲು ಹೊರಟಿದ್ದೇನೆ, ಈ ಕಥೆಗೆ ವಿನಯ್‌ ಅವ್ರೇ ಬೇಕಿತ್ತು ಪರ್ಸನಲಿ ನನಗೆ ವಿನಯ್‌ ಇಷ್ಟ’ ಎಂದರು.

ಸದ್ಯ ಬಾವ ಬಾವ ರ್ಯಾಪ್‌ ಸ್ಟೈಲ್‌ ಹಾಡು ಬಿಡುಗಡೆ ಆಗಿದ್ದು ಈ ಮೂಲಕ ಸಿಟಿಲೈಟ್ಸ್‌ ಸಿನಿಮಾದ ಪ್ರಮೋಷನ್‌ ಶುರುವಾಗಿದೆ. ಈ ಸಿನಿಮಾ ಮೂಲಕ ಪುತ್ರಿ ಮೋನಿಷಾ ವಿಜಯ್‌ಕುಮಾ‌ರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ವಿಜಯ್‌ .

‘ಸಿಟಿ ಲೈಟ್ಸ್’ನಲ್ಲಿ ಚಿತ್ರಕ್ಕೆ “ಜವಾಬ್ ದಾರಿ…ದೀಪಗಳು ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ. ಚಿತ್ರಕ್ಕೆ ಶಿವಸೇನಾ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್‌ ಹಾಗೂ ಯಂತ್ರೋದ್ದಾರಕ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕುಮಾರ್‌ ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!