ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಟಾಕ್ಸಿಕ್ ವಿಶ್ವ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿರುವ ನಡುವೆ ಪ್ರಸಿದ್ಧ ಅಂತಾರಾಷ್ಟ್ರೀಯ ನಿಯತಕಾಲಿಕೆ Variety ತನ್ನ ಕವರ್ ಪೇಜ್‌ನಲ್ಲಿ ಯಶ್ ಅವರ ಫೋಟೋವನ್ನು ಫೀಚರ್ ಮಾಡಿದೆ.
“This is Yash Effect” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ಈ ಕವರ್ ಸ್ಟೋರಿಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ಸಿನಿ ವಲಯದಿಂದ ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕನ್ನಡ ಚಿತ್ರರಂಗದ ನಟನೊಬ್ಬ ಜಾಗತಿಕ ಮಟ್ಟದ ಮ್ಯಾಗಜಿನ್ ಕವರ್‌ನಲ್ಲಿ ಕಾಣಿಸಿಕೊಂಡಿರುವುದು ಕನ್ನಡ ಸಿನಿಪ್ರಿಯರಿಗೆ ಹೆಮ್ಮೆಯ ಕ್ಷಣವಾಗಿದೆ.
‘ಕೆಜಿಎಫ್’ ಸರಣಿಯ ಭಾರೀ ಯಶಸ್ಸಿನ ಬಳಿಕ ಯಶ್ ಅವರ ಜನಪ್ರಿಯತೆ ವಿಶ್ವದಾದ್ಯಂತ ಹೆಚ್ಚಿದೆ. ಅವರು ಟಾಕ್ಸಿಕ್ ಸಿನಿಮಾದ ಮೂಲಕ ಮತ್ತೊಮ್ಮೆ ಗ್ಲೋಬಲ್ ಸಿನಿ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಬೆಳವಣಿಗೆ ಕನ್ನಡ ಸಿನಿಮಾಗಳಿಗೂ ಜಾಗತಿಕವಾಗಿ ಹೊಸ ಗುರುತನ್ನು ತಂದುಕೊಡುತ್ತಿದೆ.
ಟಾಕ್ಸಿಕ್ ಬಿಡುಗಡೆ ದಿನಾಂಕ ಶೀಘ್ರ ಹೊರಬೀಳಲಿದೆ. ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಮಟ್ಟದಲ್ಲಿ ಹೊರ ಬರಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು ಇದಕ್ಕಾಗಿ ತಯಾರಿ ನಡೆಸಿದೆ.
ಚಿತ್ರದಲ್ಲಿ ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಇತರರು ನಟಿಸಿದ್ದಾರೆ.
__





Be the first to comment