ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧೆ ಘೋಷಿಸಿದ್ದಾರೆ.
ವಿಜಯ್ ಸ್ಪರ್ಧೆಯನ್ನು ನೇರ ಹೋರಾಟವೆಂದು ಘೋಷಿಸಿದ್ದಾರೆ. “ಈ ಯುದ್ಧ ನಮ್ಮ ಮತ್ತು ಸ್ಟಾಲಿನ್ ಸರ್ ಮೈತ್ರಿಕೂಟದ ನಡುವೆ ಮಾತ್ರ” ಎಂದು ಹೇಳಿದ್ದಾರೆ. ತಮ್ಮ ಪಕ್ಷದ ಪ್ರಮುಖ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.
ಟಿ ನಗರದಿಂದ ಎನ್. ಆನಂದ್, ಮೈಲಾಪುರದಿಂದ ವೆಂಕಟ್ ರಾಮನ್, ವಿಲ್ಲಿವಕ್ಕಂನಿಂದ ಆಧವ್ ಅರ್ಜುನ, ಗೋಬಿಚೆಟ್ಟಿಪಾಳ್ಯಂನಿಂದ ಕೆ. ಎ. ಸೆಂಗ್ಕೊಟ್ಟೈಯನ್, ತಿರುಚೆಂಗೋಡ್ನಿಂದ ಕೆ. ಜಿ. ಅರುಣ್ರಾಜ್, ತಿರುಪ್ಪರಂಕುಂದ್ರಂನಿಂದ ಸಿಟಿಆರ್ ನಿರ್ಮಲ್ ಕುಮಾರ್, ಥೌಸಂಡ್ ಲೈಟ್ಸ್‌ನಿಂದ ಜೆಸಿಡಿ ಪ್ರಭಾಕರ್, ಕೊಳತ್ತೂರಿನಿಂದ ವಿಎಸ್ ಬಾಬು, ಆರ್‌ಕೆ ನಗರದಿಂದ ಡಾ. ಮಾರಿಯಾ ವಿಲ್ಸನ್ ಸ್ಪರ್ಧಿಸುತ್ತಿದ್ದಾರೆ.
ವಿಜಯ್ ತಮ್ಮ ಪಕ್ಷದ ಚುನಾವಣಾ ಭರವಸೆಗಳನ್ನು ಹಂಚಿಕೊಂಡಿದ್ದಾರೆ. ”ನಾವು ಎಂದಿಗೂ ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವುದಿಲ್ಲ. ನಮಗೆ ಒಂದು ಅವಕಾಶ ನೀಡಿ”ಎಂದು ವಿಜಯ್ ಕೇಳಿದ್ದಾರೆ.
ಉದ್ಯೋಗ ಪಡೆಯಲು ಸಾಧ್ಯವಾಗದ 29 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಿಂಗಳಿಗೆ 4 ಸಾವಿರ ರೂ., ಡಿಪ್ಲೊಮಾ ಪಡೆದವರಿಗೆ 2,500 ರೂ., 12ನೇ ತರಗತಿ ಹಂತದಿಂದ ಪಿಎಚ್‌ಡಿ ವಿದ್ಯಾರ್ಥಿಗಳವರೆಗೆ 20 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ಖಾತರಿಗಳ ಭರವಸೆ ನೀಡಲಾಗಿದೆ. ಪಕ್ಷ ಮಹಿಳೆಯರ ಸುರಕ್ಷತೆ, ಮಾದಕವಸ್ತು ಮುಕ್ತ ತಮಿಳುನಾಡು ಸ್ಥಾಪನೆ, ಕಠಿಣ ಕಾನೂನು ಮತ್ತು ಸುವ್ಯವಸ್ಥೆ ಉಳಿಸುವ ಭರವಸೆಗಳನ್ನು ಪಕ್ಷ ಹಂಚಿಕೊಂಡಿದೆ.
—–





Be the first to comment