‘ಧುರಂಧರ್2’ ದಾಖಲೆ ಕಲೆಕ್ಷನ್

ಆದಿತ್ಯ ಧರ್ ನಿರ್ದೇಶನದ “ಧುರಂಧರ: ದಿ ರಿವೆಂಜ್”  1,023 ಕೋಟಿ ರೂ. ದಾಖಲೆ ಕಲೆಕ್ಷನ್ ಮಾಡಿದೆ.

“ಧುರಂಧರ: ದಿ ರಿವೆಂಜ್” ಜಾಗತಿಕ ಬಾಕ್ಸ್ ಆಫೀಸ್‌ ನಲ್ಲಿ 342 ಕೋಟಿ ರೂ. ಕಲೆಕ್ಷನ್ ಮಾಡಿದೆ.  ಭಾರತದ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹ 867 ಕೋಟಿ ರೂ. ಆಗಿದೆ.

ಶುಕ್ರವಾರ 42 ಕೋಟಿ ರೂ., ಶನಿವಾರದಂದು 64 ಕೋಟಿ ಮತ್ತು ಭಾನುವಾರದಂದು 71 ಕೋಟಿಗಳ ನಿವ್ವಳ ಗಳಿಕೆಯೊಂದಿಗೆ “ಧುರಂಧರ: ದಿ ರಿವೆಂಜ್” ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರು ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು  ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾವನ್ನು ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ನಿರ್ಮಿಸಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಮಾ. 19 ರಂದು ಬಿಡುಗಡೆಯಾದ ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಧುರಂಧರ್ 2’   ಚಿತ್ರದಲ್ಲಿ ರಣವೀರ್ ಸಿಂಗ್, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಧುರಂಧರ್ 2’ ಚಿತ್ರದ ಕನ್ನಡ ಆವೃತ್ತಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. . ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿವೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!