ಬಿಗ್ ಬಾಸ್

‘ಮೂರು ಬಿಟ್ಟೋರು ಅಲ್ಲಿರೋಕೆ ಸಾಧ್ಯ’ ಎಂದ ನಟಿ

”ಮೂರು ಬಿಟ್ಟೋರು ಅಲ್ಲಿರೋಕೆ ಸಾಧ್ಯ” ಎಂದು ‘ಬಿಗ್ ಬಾಸ್ ಕನ್ನಡ 13’ ಮನೆಯಿಂದ ಹೊರಬಂದಿರುವ ನಟಿ ವೈಷ್ಣವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರನೇ ವಾರದ ಡಬಲ್ ಎವಿಕ್ಷನ್‌ನಲ್ಲಿ ಅವಿನಾಶ್ ಅವರೊಂದಿಗೆ ಮನೆಯಿಂದ ಹೊರಬಂದ ವೈಷ್ಣವಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ತಾವು ನಿರೀಕ್ಷಿಸಿದ್ದಕ್ಕೂ, ಒಳಗೆ ಎದುರಾದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿತ್ತು ಎಂದು ಹೇಳಿದ್ದಾರೆ.

‘ಆಟದಲ್ಲಿ ಉಳಿಯಲು ಕೆಲವರು ಮಾನವೀಯತೆ, ಸಹಾನುಭೂತಿ ಮತ್ತು ಗೌರವದ ಮೂಲಭೂತ ಮಿತಿಗಳನ್ನೇ ಮೀರಿದ್ದಾರೆ. ಜನರು ಎಲ್ಲ ಮಿತಿಗಳನ್ನೂ ಮೀರಿ, ಯಾವುದೇ ನಾಚಿಕೆ ಅಥವಾ ಮೂಲಭೂತ ಗೌರವವಿಲ್ಲದೆ ಇಲ್ಲಿಗೆ ಬರುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕೆಲವು ಸ್ಪರ್ಧಿಗಳ ಅನಿರೀಕ್ಷಿತ ಹಾಗೂ ಆಕ್ರಮಣಕಾರಿ ವರ್ತನೆ  ಆಘಾತ ಉಂಟು ಮಾಡಿತ್ತು’ ಎಂದು ತಿಳಿಸಿದ್ದಾರೆ.

‘ಮಂಜು ಮತ್ತು ಕಿರಣ್ ಶಾಸ್ತ್ರಿ ಅವರ   ನಿರಂತರ ವಿರೋಧಾತ್ಮಕ ನಡವಳಿಕೆ ಮತ್ತು ಮನೆಯೊಳಗಿನ ವರ್ತನೆಯಿಂದ  ತೀವ್ರ ಮಾನಸಿಕ ಒತ್ತಡ ಉಂಟಾಗಿತ್ತು. ಇದರಿಂದ ಬಿಗ್ ಬಾಸ್ ಮನೆ ಅತ್ಯಂತ ಕಷ್ಟಕರವಾಗಿತ್ತು’ ಎಂದು ಹೇಳಿದ್ದಾರೆ.

‘ಮನೆಯೊಳಗಿನ ಗುಂಪುಗಾರಿಕೆ ಮತ್ತು ವೈಯಕ್ತಿಕ ದಾಳಿ ಹೆಚ್ಚಾಗಿದ್ದರಿಂದ ತಮ್ಮ ಸಹಜ ಆಟವನ್ನು ಪ್ರದರ್ಶಿಸಲು ಅವಕಾಶ ಸೀಮಿತವಾಗಿತ್ತು. ಟಾಸ್ಕ್‌ಗಳು ಅಥವಾ ಆಟದ ಸಾಮರ್ಥ್ಯದ ಆಧಾರದ ಮೇಲೆ ಸ್ಪರ್ಧಿಸುವ ಬದಲು,ಕೆಲವು ಸ್ಪರ್ಧಿಗಳು ವೈಯಕ್ತಿಕ ವಿಚಾರಗಳನ್ನು ಆಟದೊಳಗೆ ಎಳೆದು ತಂದು ಪರಿಸ್ಥಿತಿಯನ್ನು ವಿಷಮಗೊಳಿಸಿದ್ದರು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!