ಬಿಗ್‌ಬಾಸ್ ನೋಡಲ್ಲ: ಅವಿನಾಶ್ ಶತಮರ್ಷನ

”ಇನ್ನು ಮುಂದೆ ನಾನು ಖಂಡಿತವಾಗಿ  ಬಿಗ್‌ಬಾಸ್ ಕಾರ್ಯಕ್ರಮವನ್ನು ನೋಡುವುದಿಲ್ಲ’  ಎಂದು ಬಿಗ್‌ಬಾಸ್ ಕನ್ನಡ ಸೀಸನ್ 13ರಿಂದ ಎಲಿಮಿನೇಟ್ ಆದ ಬಳಿಕ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಶತಮರ್ಷಣ ಅವರು ನೇರವಾಗಿ ಹೇಳಿದ್ದಾರೆ.

“ನಾನು ಬಿಗ್‌ಬಾಸ್ ಮನೆಗೆ ಯಾವುದೇ ರೀತಿಯ ಪೂರ್ವಾಭ್ಯಾಸ ಮಾಡಿಕೊಂಡು ಹೋಗಿರಲಿಲ್ಲ. ಪೂರ್ವಾಭ್ಯಾಸ ಎನ್ನುವುದು ರಂಗಭೂಮಿಯ ನಾಟಕಗಳಿಗೆ. ನೈಜವಾಗಿರುವುದಕ್ಕೆ ಅಲ್ಲ. ನನ್ನ ಸ್ವಭಾವವನ್ನು ನಾನು ಬದಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

“ಅಲ್ಲಿ ಸ್ಪರ್ಧಿಗಳು ನಿಯಮಗಳನ್ನು ಪಾಲಿಸುವುದಿಲ್ಲ. ಕೆಟ್ಟ ಪದಗಳನ್ನು ಬಳಸುತ್ತಾರೆ. ಯಾರಿಗೂ ಗೌರವ ನೀಡುವುದಿಲ್ಲ. ಊಟವನ್ನೂ ಕದಿಯುತ್ತಾರೆ. ಅಂತಹ ಜನರ ನಡುವೆ ಹೇಗೆ ಬದುಕಬೇಕು? ಅಲ್ಲಿ ಯಾರೊಂದಿಗೂ ನನಗೆ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾರನ್ನೂ ಇಷ್ಟಪಡಲಿಲ್ಲ. ಆದರೆ ಬಿಗ್‌ಬಾಸ್ ವೇದಿಕೆಯ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದಿದ್ದಾರೆ.

ಅವಿನಾಶ್ಎ ಲಿಮಿನೇಷನ್ ಬಳಿಕ ವೇದಿಕೆಯಲ್ಲಿ ಮಾತನಾಡಿದ ನಿರೂಪಕ ಕಿಚ್ಚ ಸುದೀಪ್, ‘ಇಂತಹ ಕಾರ್ಯಕ್ರಮದ ಸ್ವರೂಪಕ್ಕೆ ಅವಿನಾಶ್ ಅವರ ವ್ಯಕ್ತಿತ್ವ ಹೊಂದಿಕೆಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು. ಈ ಮಾತನ್ನು ಅವಿನಾಶ್ ಒಪ್ಪಿಕೊಂಡರು. ಇದೇ ವೇಳೆ ‘ಭೀಮ’ ಖ್ಯಾತಿಯ ನಟಿ ಹಾಗೂ ಅವಿನಾಶ್ ಅವರ ಪತ್ನಿ ಪ್ರಿಯಾ ಶತಮರ್ಷನ ಅವರು ವೇದಿಕೆಯಲ್ಲಿ ಭಾವುಕರಾದರು.

ಸಂತ ಶಿಶುನಾಳ ಶರೀಫರ ತಾತ್ವಿಕ ಕೃತಿ ‘ತರವಲ್ಲ ತಗಿ ನಿನ್ನ ತಂಬೂರಿ’ಯ ಸಾಲುಗಳನ್ನು ಉಲ್ಲೇಖಿಸಿದ ಅವರು, ‘ಆಟದ ಭಾಗವಾಗಿರುವ ತಂತ್ರಗಾರಿಕೆ ಹಾಗೂ ಕುತಂತ್ರದ ಸ್ವರೂಪಗಳು ತಮ್ಮ ಪತಿಯ ಜೀವನದ ದೃಷ್ಟಿಕೋನಕ್ಕೆ ಹೊಂದಿಕೆಯಾಗುವುದಿಲ್ಲ’ ಎಂದು ಹೇಳಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!