ಬಿಗ್ ಬಾಸ್ ಅಗ್ನಿಪರೀಕ್ಷೆ ಜೋಡಿಯ ಸುತ್ತಾಟ

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದ  ಲಿಖಿತ್ ಮತ್ತು ಅನನ್ಯಾ   ಗೋಕರ್ಣದ ಕಡಲತೀರದಲ್ಲಿ ಜೊತೆಯಾಗಿ ಸುತ್ತಾಡುತ್ತಾ ಸಮಯ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದ ಮೂಲಕ ಲಿಖಿತ್ ಮತ್ತು ಅನನ್ಯಾ ನಡುವೆ ಪರಿಚಯ ಬೆಳೆದಿತ್ತು. ಈ ಕಾರ್ಯಕ್ರಮದಲ್ಲಿ ಲಿಖಿತ್ ಬಿಗ್ ಬಾಸ್ ಮನೆಗೆ ಪ್ರವೇಶಿಸಿ  ಒಂದು ತಿಂಗಳ ಕಾಲ ಸ್ಪರ್ಧಿಯಾಗಿ ಉಳಿದಿದ್ದರು.  ಅನನ್ಯಾಗೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಿರಲಿಲ್ಲ.  ಕಾರ್ಯಕ್ರಮದ ಮೂಲಕ ಆರಂಭವಾದ ಇವರ ಪರಿಚಯ ಬಿಗ್ ಬಾಸ್ ಆಟದಾಚೆಗೆ  ಕಡಲತೀರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ.

ಸುಂದರ ತಾಣದಲ್ಲಿ ಜೊತೆಯಾಗಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.  ಇವರ ಸ್ನೇಹದ ಸ್ವರೂಪದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.

ಇಬ್ಬರ ಒಡನಾಟದ ಚಿತ್ರಗಳು ಹೊರಬರುತ್ತಿದ್ದಂತೆ, ಇದು ಸ್ನೇಹವೋ ಅಥವಾ ಅದಕ್ಕಿಂತ ಹೆಚ್ಚಿನದೋ ಎಂಬ ಚರ್ಚೆ ನೆಟ್ಟಿಗರ ವಲಯದಲ್ಲಿ ಶುರುವಾಗಿದೆ.   ಈ ಬಗ್ಗೆ ಇಬ್ಬರೂ ಯಾವುದೇ  ಸ್ಪಷ್ಟನೆ ನೀಡಿರುವ ಮಾಹಿತಿ ಇಲ್ಲ.

ಬಿಗ್ ಬಾಸ್ ಅಗ್ನಿಪರೀಕ್ಷೆಯ ಮೂಲಕ ಆರಂಭವಾದ ಲಿಖಿತ್ ಮತ್ತು ಅನನ್ಯಾ ಪರಿಚಯ ಈಗ ಗೋಕರ್ಣದ ಪ್ರವಾಸದ ಮೂಲಕ  ಸುದ್ದಿಯಲ್ಲಿದೆ. ಇವರ ಸ್ನೇಹ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!