‘ದಿ ರಿಯಲ್‌ ಪ್ರಜಾಕೀಯ’ ಆ್ಯಪ್‌ ಬಿಡುಗಡೆ ಮಾಡಿದ ಉಪೇಂದ್ರ

ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಅವರು ತಮ್ಮ ಪ್ರಜಾಕೀಯ ಪಕ್ಷದ ‘ದಿ ರಿಯಲ್‌ ಪ್ರಜಾಕೀಯ’ ಎಂಬ ಆ್ಯಪ್‌ ನ್ನು ಬಿಡುಗಡೆ ಮಾಡಿದ್ದಾರೆ.

ಪ್ರೆಸ್‌ಕ್ಲಬ್ ನಲ್ಲಿ ಉಪೇಂದ್ರ ಆ್ಯಪ್‌ ಬಿಡುಗಡೆ ಮಾಡಿ ಜನರು ಹಾಗೂ ಪ್ರಜಾಕೀಯ ಮಧ್ಯೆ ನೇರ ಸಂಪರ್ಕಕ್ಕೆ ಹೊಸ ವೇದಿಕೆ ಕಲ್ಪಿಸಿದ್ದಾರೆ. ಆ್ಯಪ್‌ ಮೂಲಕ ಜನರೊಂದಿಗೆ ನಿರಂತರ ಸಂಪರ್ಕಕ್ಕೆ ಪ್ರಯತ್ನ ಮಾಡಿದ್ದಾರೆ.

ಆ್ಯಪ್‌  ಬಿಡುಗಡೆ ಮಾಡಿ ಮಾತನಾಡಿದ ಉಪೇಂದ್ರ,  ‘ನಾನು ಬರ್ತಿನಿ, ನಿಮ್ಮನ್ನೆಲ್ಲಾ ಉದ್ದಾರ ಮಾಡ್ತೀನಿ. ಸಮಯ ಬರುವವರೆಗೂ ಕಾಯುತ್ತಿರುತ್ತೇನೆ, ಸದಾ ಹೊಸ ಪ್ರಯತ್ನ ನಾನು ಮಾಡುತ್ತಿರುತ್ತೇನೆ. ನೀವು ನನ್ನ ದಡ್ಡ, ಮೂರ್ಖ ಅಂದರೂ ಪರವಾಗಿಲ್ಲ, ನಾನು ನನ್ನ ಪ್ರಯತ್ನ ಮುಂದುವರಿಸುತ್ತಾ ಇರುತ್ತೇನೆ’ ಎಂದರು.

‘ನಮ್ಮ ಪಕ್ಷ ಕೋಮಾದಲ್ಲಿಲ್ಲ. ಹಾಗೆ ನೋಡುವವರೇ ಕೋಮಾದಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಕಮೆಂಟ್ ನೋಡಿ ನಮ್ಮ ಪಕ್ಷದ ಬಗ್ಗೆ ನಿರ್ಧಾರ ಮಾಡಬೇಡಿ. ‘ರೈಟ್ ಟು ರೀಕಾಲ್’ ಕಾನೂನು ಬರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಪಕ್ಷದಿಂದ ಏನನ್ನೂ ನಿರೀಕ್ಷೆ ಮಾಡಬೇಡಿ. ಇದು ಬಿಜೆಪಿ ಪಕ್ಷವಲ್ಲ. ಇದು ಪ್ರಜಾಕೀಯ ಪಕ್ಷ’ ಎಂದರು

‘ಪ್ರಜಾಕೀಯದಲ್ಲಿ ನಾಯಕತ್ವದ ಪರಿಕಲ್ಪನೆಯೇ ಇಲ್ಲ.ನಮಗೆ ಜನರ ಬೇಡಿಕೆಗಳನ್ನು ಈಡೇರಿಸಲು ನಾಯಕ ಬೇಡ, ಕೆಲಸ ಮಾಡುವ ಕಾರ್ಮಿಕ ಬೇಕು. ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೋ ಅಂತಹವರು ಮಾತ್ರ ನಮ್ಮ ಪಾರ್ಟಿಗೆ ಬರಲಿ. ಸದ್ಯ  ಮುನ್ಸಿಪಲ್ ಚುನಾವಣೆಗಾಗಿ ವಾರ್ಡ್‌ ವಾರು ಮಾಡಲ್ ಸಿದ್ಧಪಡಿಸಿದ್ದೇವೆ. ಏರಿಯಾದ  ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಪರಿಹಾರ ನೀಡುವ ಚಾರ್ಟ್ ಸಿದ್ಧಪಡಿಸಲಾಗಿದೆ. ರ್ಕ್ ಹೇಗೆ ಮಾಡಬೇಕು ಅನ್ನೋದನ್ನ ಸ್ಪರ್ಧಿಗಳಲ್ಲಿ ಹೇಳಿ ಸೈನ್ ಮಾಡಿಸಿರುತ್ತೇವೆ ‘ ಎಂದರು.

ಚುನಾವಣೆಗೆ ನಿಲ್ಲುವ ಬಗ್ಗೆ ಕೇಳಿದ ಪ್ರಶ್ನೆಗೆ ಉಪೇಂದ್ರ, ‘ಮುಂದೆ ನೋಡೋಣ. ಸದ್ಯಕ್ಕೆ ಜನರಿಗೆ ಅವಕಾಶ ಸಿಗಬೇಕು’ ಎಂದರು.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!