ನಟಿಗೆ ಒಳ ಉಡುಪು ಗಿಫ್ಟ್ ಕೊಟ್ಟ ಖ್ಯಾತ ನಟ!

ಮಲಯಾಳಂ ಚಿತ್ರರಂಗದ ಖ್ಯಾತ ನಟ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ನಟಿಗೆ ಒಳಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದೇ   ನಟ ಮದ್ಯ ಮತ್ತು ಗಾಂಜಾದ ಪ್ರಭಾವದಲ್ಲಿದ್ದಾಗ ತನ್ನ ವೈಯಕ್ತಿಕ ಜೀವನ ಹಾಗೂ ಮಲಗುವ ಕೋಣೆಯ ಕುರಿತು ಮಾತನಾಡಿದ್ದಾನೆ ಎಂಬ ಆರೋಪವೂ  ಇದೆ.  ಈ ಆರೋಪಗಳಿಗೆ ಸಂಬಂಧಿಸಿದಂತೆ ನಟನ ಹೆಸರು ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ.

ಕೇರಳದಲ್ಲಿ ಕಳೆದ ವರ್ಷ ಪ್ರಕಟವಾದ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವಾರು ಆಘಾತಕಾರಿ ವಿಚಾರಗಳನ್ನು ಬೆಳಕಿಗೆ ತಂದಿತ್ತು. ಈ ವರದಿಯ ನಂತರ ಹಲವು ಪ್ರಮುಖ ನಟರ ಹೆಸರುಗಳು ಚರ್ಚೆಗೆ ಗ್ರಾಸವಾಗಿದ್ದವು.

ಈ  ಹೊಸ ಆರೋಪಗಳು  ಚಿತ್ರರಂಗದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಆರೋಪಗಳು ನಿರಂತರವಾಗಿ ಕೇಳಿಬರುತ್ತಿರುವ ಹಿನ್ನೆಲೆ ಈ ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಚಿತ್ರರಂಗದಲ್ಲಿ ಚರ್ಚೆಗಳು ಜೋರಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!