ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿ ವಂಚಕರು ಸುಮಾರು 1.5 ರಿಂದ 2 ಲಕ್ಷ ರೂ. ಲಪಟಾಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ ಉಪೇಂದ್ರ, ‘ಎಲ್ಲರಿಗೂ ನಮಸ್ಕಾರ.. ದಯವಿಟ್ಟು ಎಲ್ಲರಿಗೂ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಪ್ರಿಯಾಂಕಾ ಅವರಿಗೆ ಒಂದು ನಂಬರ್ನಿಂದ ಕರೆ ಬಂದಿದೆ. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧಿಸಿದ ಮೆಸೇಜ್ ಇದು ಎಂದು ಅವಳು ಭಾವಿಸಿದ್ದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ
ಪ್ರಿಯಾಂಕಾ ಹಾಗೂ ನನ್ನ (ಉಪೇಂದ್ರ) ಮೊಬೈಲ್ನಿಂದ ಯಾರಾದರೂ ದುಡ್ಡು ಕಳುಹಿಸಿ ಎಂದು ಏನಾದರೂ ಸಂದೇಶ ಬಂದರೆ ದಯವಿಟ್ಟು ಕಳುಹಿಸೋದಕ್ಕೆ ಹೋಗಬೇಡಿ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್ನಲ್ಲಿರೋ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ .ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ ಕರೆ ಮಾಡಿ, ನಾವು ಫೋನ್ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ ಈಗ ಮಾತನಾಡೋಕೆ ಆಗಲ್ಲ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ ಯಾರೂ ಹಣ ಕಳುಹಿಸಿಲ್ಲ. ನಾವು ಈಗಲೇ ಪೊಲೀಸರಿಗೆ ದೂರು ಕೊಡಲು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿ ತುರ್ತು ಹಣ ಕಳುಹಿಸುವಂತೆ ಕೇಳಿದ್ದಾರೆ. ಇದನ್ನು ನಂಬಿ 3ರಿಂದ ನಾಲ್ಕು ಮಂದಿ ಹಣ ಕಳುಹಿಸಿದ್ದಾರೆ. ನನ್ನ ಮಗ ಆಯೂಷ್ ಮತ್ತು ಪ್ರಿಯಾಂಕಾಳ ಇಬ್ಬರು ಸ್ನೇಹಿತರು ತಲಾ 55,000 ಸಾವಿರ ರೂ. ಕಳುಹಿಸಿದ್ದಾರೆ. ನಮಗೆ ಬಂದಿರುವ ಮಾಹಿತಿಯ ಪ್ರಕಾರ ಸುಮಾರು 1.5 ರಿಂದ 2 ಲಕ್ಷ ರೂ. ಹೋಗಿದೆ. ಬೇರೆ ಯಾರಾದರೂ ಹಣ ಕಳುಹಿಸಿದ್ದಾರೆಯೇ ಎಂದು ನಾವು ಪರಿಶೀಲಿಸಬೇಕಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.
—-





Be the first to comment