ಒಟಿಟಿ ಸ್ಟ್ರೀಮಿಂಗ್ ನಲ್ಲಿ ‘ದಿ ರೈಸ್ ಆಫ್ ಅಶೋಕ’ ಟಾಪ್ ಟ್ರೆಂಡಿಂಗ್

ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಜಿಯೋಹಾಟ್‌ಸ್ಟಾರ್‌ನಲ್ಲಿ ಭಾರತದಲ್ಲಿ 7 ನೇ ಸ್ಥಾನದಲ್ಲಿದೆ. 

ನಾಯಕ ನಟ ಸತೀಶ್ ನೀನಾಸಂ  ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಸದ್ಯ ಟಾಪ್ ಟ್ರೆಂಡಿಂಗ್ ಲ್ಲಿ ಓಡುತ್ತಿದೆ. ತುಂಬಾ ಶ್ರಮ ಶ್ರದ್ಧೆಯೊಂದಿಗೆ ಮಾಡಿದ ಚಿತ್ರ ‘ದಿ ರೈಸ್ ಆಫ್ ಅಶೋಕ’. ಇದೊಂದು ಸಾರ್ಥಕ ಕ್ಷಣ. ನಮ್ಮ ಜೊತೆ ನಿಂತ ಎಲ್ಲರಿಗೂ ಧನ್ಯವಾದ’  ಎಂದು ಹೇಳಿದ್ದಾರೆ.

 ‘ದಿ ರೈಸ್ ಆಫ್ ಅಶೋಕ’ ಹಿಂದಿ ಮಾತನಾಡುವ ವೀಕ್ಷಕರಲ್ಲಿ  ಹೊಸ ಸಂಚಲನ ಮೂಡಿಸಿದೆ. ಡಬ್ಬಿಂಗ್ ಆವೃತ್ತಿ  ಜಿಯೋಹಾಟ್‌ಸ್ಟಾರ್‌ನ ಇಂಡಿಯಾ ಟ್ರೆಂಡಿಂಗ್ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಏರಿದೆ.  ಮೂಲತಃ ಕನ್ನಡದಲ್ಲಿ ಬಿಡುಗಡೆಯಾದ ಈ ಚಿತ್ರ  ತನ್ನ ಹಿಂದಿ-ಡಬ್ಬಿಂಗ್ ಬಿಡುಗಡೆಯ ಮೂಲಕ ಹೆಜ್ಜೆಗುರುತನ್ನು ನಿರ್ಮಿಸಿದೆ.

‘ದಿ ರೈಸ್ ಆಫ್ ಅಶೋಕ ಚಿತ್ರ ತೆರೆ ಕಂಡು ಐದಾರು ತಿಂಗಳೇ ಆಗಿದೆ. ಈ ನಡುವೆ ಚಿತ್ರ ಒಟಿಟಿಗೂ ಲಗ್ಗೆ ಇಟ್ಟಿದೆ.

ಸತೀಶ್ ನೀನಾಸಂ  ಮುಂದಿನ ಚಿತ್ರ ‘ಅಯೋಗ್ಯ 2’  ಆಗಸ್ಟ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!