ಕನ್ನಡ ಚಿತ್ರರಂಗದಲ್ಲಿ ಕೃತಿಚೌರ್ಯ?

‘ಮಾರಿಗೋಲ್ಡ್’ ಚಿತ್ರದ ನಿರ್ದೇಶಕ ರಾಘವೇಂದ್ರ ನಾಯಕ್  ತಮ್ಮ ಕಥೆಯನ್ನು ಅನಧಿಕೃತವಾಗಿ ಬಳಸಿಕೊಂಡು ಸಿನಿಮಾ ನಿರ್ಮಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಥೆ ಸಿದ್ಧವಾದ ತಕ್ಷಣ Screenwriters Association (SWA) ನಲ್ಲಿ ನೋಂದಾಯಿಸಿಕೊಳ್ಳುವುದು, ಪ್ರತಿಯೊಂದು ಹಂತದ ದಾಖಲೆಗಳನ್ನು ಇಮೇಲ್ ಮೂಲಕ ಸುರಕ್ಷಿತವಾಗಿಡುವುದು, ಕಥೆ ವಿವರಿಸುವ ಸಂದರ್ಭಗಳಲ್ಲಿ ಆಡಿಯೋ ದಾಖಲೆ ಇಟ್ಟುಕೊಳ್ಳುವುದು  ಮುಖ್ಯ ಎಂದು ರಾಘವೇಂದ್ರ ನಾಯಕ್  ಸಲಹೆ ನೀಡಿದ್ದಾರೆ.

ಮುನ್ನೆಚ್ಚರಿಕೆ ವಹಿಸದ ಕಾರಣದಿಂದಲೇ ತಮಗೆ ದೊಡ್ಡ ಅನ್ಯಾಯವಾಗಿದೆ. ತಮ್ಮ ಕಥೆಯ ಸಂಪೂರ್ಣ ದ್ವಿತೀಯಾರ್ಧವನ್ನು ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಈ ಕಥೆ ತಮ್ಮದೇ ಎಂಬುದು ತಮ್ಮ ಆಪ್ತ ವಲಯದ ನಿರ್ಮಾಪಕರು, ತಂತ್ರಜ್ಞರು ಹಾಗೂ ಸ್ನೇಹಿತರಿಗೆ ತಿಳಿದಿದೆ. ಅವರು ಮುಂದುವರೆದು, ಕನ್ನಡದ ಖ್ಯಾತ ನಿರ್ದೇಶಕ-ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ತಂಡದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಕಥೆಯನ್ನು ಒಬ್ಬ ‘ನಿರ್ದೇಶಕ-ನಿರ್ಮಾಪಕ ಕಮ್ ನಟ’ನಿಗೆ ವಿವರಿಸಿದ್ದಾಗಿ ಹೇಳಿದ್ದಾರೆ.

ತಮ್ಮ ಬಳಿ ಕಥೆಯ ಮೂಲದ ದಾಖಲೆಗಳಿದ್ದರೂ, ಅದೇ ಕಥೆಯನ್ನು ಆ ವ್ಯಕ್ತಿಗೆ ವಿವರಿಸಿದ್ದೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳಿಲ್ಲದ ಕಾರಣ   ಕಾನೂನು ಕ್ರಮ ಕೈಗೊಳ್ಳಲು ಅಸಹಾಯಕರಾಗಿದ್ದೇನೆ. ಈ ಅನುಭವದಿಂದ ಪಾಠ ಕಲಿತು ಇತರ ಬರಹಗಾರರು  ಮೋಸಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಈ ಪೋಸ್ಟ್ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನಿಮಾ ‘ಲವ್ ಮಾಕ್ಟೇಲ್ 3’ ಮೇಲೆ ಈ ಆರೋಪ ಇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ನಿರ್ದೇಶಕ-ನಿರ್ಮಾಪಕ ಕಮ್ ನಟ   ಡಾರ್ಲಿಂಗ್ ಕೃಷ್ಣ ಇರಬಹುದು ಎಂಬ ಚರ್ಚೆ ಜೋರಾಗಿದೆ.

ಈ ಆರೋಪಗಳ ಬಗ್ಗೆ ಸಂಬಂಧಿತ ಚಿತ್ರತಂಡದಿಂದ ಯಾವುದೇ  ಸ್ಪಷ್ಟನೆ  ಬಂದಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!