ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾಗೆ ದಿಗ್ಗಜ ನಟ ರಜನಿಕಾಂತ್ ಮೆಚ್ಚುಗೆ ಸಿಕ್ಕಿದೆ.
ಸಿನಿಮಾ ವೀಕ್ಷಿಸಿದ ರಜನಿಕಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ವಾಟ್ ಎ ಫಿಲ್ಮ್… ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್” ಎಂದು ಹೊಗಳಿದ್ದಾರೆ. ರಣವೀರ್ ಸಿಂಗ್ ಸೇರಿದಂತೆ ಸಂಪೂರ್ಣ ತಂಡದ ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿ “ಪ್ರತಿ ಭಾರತೀಯನು ನೋಡಲೇಬೇಕಾದ ಸಿನಿಮಾ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಧುರಂಧರ್2′ ಸಿನಿಮಾ ದೇಶೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಸಿನಿಮಾ ಇದೀಗ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಬರೆಯುತ್ತಿದೆ. ‘ಜಿಯೋ ಸ್ಟುಡಿಯೋಸ್’ ನಿರ್ಮಾಣದ ಸಿನಿಮಾ ಮೊದಲ ವಾರಾಂತ್ಯದಲ್ಲೇ ವಿಶ್ವದಾದ್ಯಂತ 761 ಕೋಟಿ ರೂಪಾಯಿ ಗಳಿಸಿ ಭರ್ಜರಿ ಆರಂಭ ಪಡೆದಿದೆ. ಭಾರತದ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೂ ‘ಧುರಂಧರ್: ದಿ ರಿವೆಂಜ್’ ಪಾತ್ರವಾಗಿದೆ. ಬುಕ್ ಮೈ ಶೋನಲ್ಲಿ ಒಂದೇ ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ.
ವಿದೇಶಗಳಲ್ಲಿ ಮೊದಲ ವಾರಾಂತ್ಯದಲ್ಲೇ 210 ಕೋಟಿ ರೂಪಾಯಿ ಗಳಿಸಿ ಅತಿ ದೊಡ್ಡ ಓವರ್ಸೀಸ್ ಓಪನಿಂಗ್ ಪಡೆದ ಭಾರತೀಯ ಚಿತ್ರವಾಗಿ ‘ಧುರಂಧರ್: ದಿ ರಿವೆಂಜ್’ ಹೊರಹೊಮ್ಮಿದೆ. ದೇಶಪ್ರೇಮದ ಕಥಾಹಂದರ ಹೊಂದಿರುವ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಯನ್ನು ಎತ್ತಿ ಹಿಡಿಯುತ್ತಿದೆ. ಆದರೆ ‘ಧುರಂಧರ್2′ ಚಿತ್ರದ ವಿರುದ್ಧ ಟೀಕೆಗಳೂ ಕೇಳಿ ಬಂದಿವೆ. ಕೆಲವರು ಇದನ್ನು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದಾರೆ.
—-





Be the first to comment