ಸಿತಾರೆ ಜಮೀನ್ ಪರ್

ವಿಶೇಷ ಚೇತನ ಮಕ್ಕಳಿಗಾಗಿ ‘ಸಿತಾರೆ ಜಮೀನ್ ಪರ್’ ಚಿತ್ರ ಪ್ರದರ್ಶನ

ಬೆಂಗಳೂರು: ಡೌನ್ ಸಿಂಡ್ರಾಮ್ ಮತ್ತು ಆರ್ಟಿಸಂ ವ್ಯಾಧಿಯಿಂದ ಬಳಲುತ್ತಿರುವ ಮಕ್ಕಳಿಗಾಗಿ ನಗರದ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಹಿಂದಿಯ ‘ಸಿತಾರೆ ಜಮೀನ್ ಪರ್’ ಚಿತ್ರದ ಉಚಿತ ಪ್ರದರ್ಶನವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಸಿತಾರೆ ಜಮೀನ್ ಪರ್

ನಟ ಅಮೀರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ ಚಿತ್ರದ ಕಥಾಹಂದರ ಡೌನ್ ಸಿಂಡ್ರಾಮ್ ಮತ್ತು ಆರ್ಟಿಸಂ ವ್ಯಾಧಿಯಿಂದ ಬಳಲುತ್ತಿರುವ ಮಕ್ಕಳ ಕುರಿತಾಗಿದ್ದು, ಚಿತ್ರ ಇಂಥ ಮಕ್ಕಳ ಮನಸ್ಸಿನಲ್ಲಿ ಭರವಸೆ ಮೂಡಿಸುವಂತಿದೆ. ಹೀಗಾಗಿ ಇಂಥ ಮಕ್ಕಳಿಗೆ ಉಚಿತವಾಗಿ ಈ ಚಿತ್ರವನ್ನು ಪ್ರದರ್ಶಿಸಲಾಯಿತು ಎಂದು ವಿರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ಎಲ್. ಸಿ ಮತ್ತು ಆಯೋಜಕ ಬಿ. ಹೆಚ್. ಉಲ್ಲಾಸ್ ಗೌಡ ತಿಳಿಸಿದ್ದಾರೆ. ಚಿತ್ರದ ವಿಶೇಷ ಪ್ರದರ್ಶನದ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಸಿತಾರೆ ಜಮೀನ್ ಪರ್

Be the first to comment

Leave a Reply

Your email address will not be published. Required fields are marked *

Translate »
error: Content is protected !!