ಗಲ್ಲಾಪೆಟ್ಟಿಗೆಯಲ್ಲಿ ‘ಜನ ನಾಯಗನ್’ ಅಬ್ಬರ

ತಮಿಳುನಾಡು ಸಿಎಂ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಕನ್’ ಮೊದಲ ದಿನ  41 ಕೋಟಿ  ₹ ಗಳಿಕೆ ಕಂಡಿದೆ.

‘ಜನ ನಾಯಕನ್’ ಜುಲೈ 23ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದು, ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ ಚಿತ್ರ  ಬಿಡುಗಡೆಯಾದ ಮೊದಲ ದಿನ 13,067 ಪ್ರದರ್ಶನಗಳ ಮೂಲಕ ₹41 ಕೋಟಿ ನಿವ್ವಳ  ಗಳಿಕೆ ಕಂಡಿದೆ.  ಭಾರತದಲ್ಲಿ  ಒಟ್ಟು ಗಳಿಕೆ  48.27 ಕೋಟಿ ₹ ತಲುಪಿದೆ. ಈ ಆ್ಯಕ್ಷನ್ ಚಿತ್ರ  ಜಾಗತಿಕ ಮಟ್ಟದಲ್ಲಿ 78.27 ಕೋಟಿ ₹ಗಳ ಭಾರಿ ಗಳಿಕೆ ಕಂಡಿದೆ. ಇದರಲ್ಲಿ ಸಾಗರೋತ್ತರ ಮಾರುಕಟ್ಟೆಯ 30 ಕೋಟಿ ₹ ಗಳಿಕೆ ಸೇರಿದೆ.

ತಮಿಳು ಆವೃತ್ತಿ  ಅತಿ ಹೆಚ್ಚು ಅಂದರೆ 36.50 ಕೋಟಿ ₹ ಕಲೆಕ್ಷನ್ ಮಾಡಿದೆ.    ತೆಲುಗು ಮತ್ತು ಹಿಂದಿ ಡಬ್ಡ್ ಆವೃತ್ತಿಗಳು ಕ್ರಮವಾಗಿ 2.75 ಕೋಟಿ ₹ ಮತ್ತು 1.75 ಕೋಟಿ ₹   ಗಳಿಕೆ ಕಂಡಿವೆ.

‘ಜನ ನಾಯಕನ್’ ವೆಂಕಟ್ ಪ್ರಭು ನಿರ್ದೇಶನದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’   ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ವಿಜಯ್ ನಟಿಸಿದ್ದ ‘ಲಿಯೋ’ ಚಿತ್ರಗಳು ಸ್ಥಾಪಿಸಿದ್ದ ದಾಖಲೆಗಳನ್ನು ಮೀರುವಲ್ಲಿ ವಿಫಲವಾಗಿದೆ. ಮೊದಲ ದಿನ ‘GOAT’ 50 ಕೋಟಿ ₹ಗಿಂತ ಹೆಚ್ಚು ಗಳಿಸಿದ್ದರೆ, ‘ಲಿಯೋ’ 66.50 ಕೋಟಿ ₹ಗಳಿಸಿತ್ತು.

ಚಿತ್ರ  ಮಮಿತಾ ಬೈಜು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಅವರಲ್ಲದೆ, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೇನ್, ಪ್ರಿಯಮಣಿ  ತಾರಾಬಳಗವನ್ನು ಒಳಗೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಧಿಕೃತವಾಗಿ ತಮಿಳು ಚಿತ್ರರಂಗ  ಪ್ರವೇಶಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!