ಶ್ರೀಮತಿ ಸಿಂಧೂರ

ಜು. 24ರಂದು ‘ಶ್ರೀಮತಿ ಸಿಂಧೂರ’ ಚಿತ್ರ ಬಿಡುಗಡೆ

ಆರ್ ಅಂಡ್ ಆರ್ ಎಂಟರ್‌ಪ್ರೈಸಸ್ ಅಡಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್.ನಾಗೀರೆಡ್ಡಿ ಕಥೆ-ನಿರ್ಮಾಣ, ಆರ್.ಅನಂತರಾಜು ಚಿತ್ರಕಥೆ ಮತ್ತು ನಿರ್ದೇಶನ, ವಿಜಯರಾಘವೇಂದ್ರ ಅಭಿನಯಿಸಿರುವ ’ಶ್ರೀಮತಿ ಸಿಂಧೂರ’ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಇದರನ್ವಯ ಪ್ರಚಾರದ ಕೊನೆ ಹಂತವಾಗಿ ಪ್ರಿ ರಿಲೀಸ್ ಇವೆಂಟ್ ಎಸ್‌ಆರ್‌ವಿ ಪ್ರಿವ್ಯೂ ಟಾಕೀಸ್‌ದಲ್ಲಿ ಅದ್ದೂರಿಯಾಗಿ ನಡೆಯಿತು.

ಶ್ರೀಮತಿ ಸಿಂಧೂರ

ನಾಯಕ ವಿಜಯ ರಾಘವೇಂದ್ರ ಮಾತನಾಡಿ, ಆಂಜನೇಯನ ಸಾಂಗ್ ಸಿನಿಮಾದ ಹೈಲೈಟ್ ಆಗಿದ್ದು ಕೈಲಾಶ್‌ಖೇರ್ ಹಾಡಿರುವುದು ವಿಶೇಷ. ಹುಡುಗಿಯೊಬ್ಬಳು ಮದುವೆ ಆದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ. ಇದೊಂದು ಪಕ್ಕಾ ಕೌಟಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾ ಆಗಿದೆ ಎಂದರು.

ಶ್ರೀಮತಿ ಸಿಂಧೂರ

ನಾಯಕಿ ಪ್ರಿಯಾಹೆಗಡೆ, ಹೊಸ ಪರಿಚಯ ಡಿ.ಎನ್.ಲಿಯೋ ಮನೋಜ್, ಗಣೇಶ್‌ರಾವ್ ಕೇಸರಕರ್, ರೇಷ್ಮಾ.ವಿ.ಗೌಡ, ಪ್ರಸನ್ನಬಾಗೀನ, ಉಗ್ರಂ ರವಿ, ಮಾಸ್ಟರ್ ಮೌರ್ಯ, ಆಂಜನೇಯ ಸ್ವಾಮಿ ಪಾತ್ರ ನಿರ್ವಹಿಸಿರುವ ಮಾರುತಿ, ಅಂಜಲಿ ಹಾಗೂ ಕಾರ್ಯಕಾರಿ ನಿರ್ಮಾಪಕ ಗಂಗಾಧರ್ ಹಾಜರಿದ್ದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್‌ರಾಮನಾಥ್ ಗ್ಯಾಪ್ ನಂತರ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ ಚಿತ್ರವು ವಿತರಕ ಚಂದನ್ ಸುರೇಶ್ ಮುಖಾಂತರ ಇದೇ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ರೀಮತಿ ಸಿಂಧೂರ

Be the first to comment

Leave a Reply

Your email address will not be published. Required fields are marked *

Translate »
error: Content is protected !!