ಉದ್ಯಮ ಆರಂಭಿಸಿದ ಪುನೀತ್‌ ಪುತ್ರಿ ವಂದಿತಾ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಬೆಂಗಳೂರಿನಲ್ಲಿ ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ.

ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ ‘ನುಕ್ಕಿ’ ಎಂಬ ಅಡ್ಡಹೆಸರನ್ನು ‘ನುಕಾಸ್ ಕೆಫೆ’  ಎಂದು ತಮ್ಮ ಬ್ರ್ಯಾಂಡ್‌ಗೆ ಇಟ್ಟಿದ್ದಾರೆ.  ತಿರಮಿಸು, ಬ್ರೌನಿ ಮತ್ತು ಚೀಚೀಸ್ ಕೇಕ್ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ಸ್ವತಃ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಅಪ್ಪ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವ ವಂದಿತಾಗೆ ಅಭಿಮಾನಿಗಳಿಂದ ಶುಭಾಶಯ ಹರಿದು ಬರುತ್ತಿದೆ.

ಬೆಂಗಳೂರಿನಲ್ಲಿ ವಂದಿತಾ ಪುನೀತ್ ರಾಜ್‌ಕುಮಾರ್ ಯಾವುದೇ ಬೇಕರಿ ತೆರೆದಿಲ್ಲ. ನುಕಾ’ ಸ್ ಕೆಫೆ ವೆಬ್‌ಸೈಟ್ ಮೂಲಕ ಆರ್ಡರ್‌ಗಳನ್ನ ತೆಗೆದುಕೊಂಡು ಮನೆಯಲ್ಲೇ ಬೇಕರಿ ತಿನಿಸು  ತಯಾರಿಸಿ ಡೆಲಿವರಿ ಕಳುಹಿಸುತ್ತಾರೆ.

ಚಾಕೊಲೇಟ್ ಕಪ್ ಕೇಕ್, ವೆನಿಲ್ಲಾ ಕಪ್ ಕೇಕ್, ರೆಡ್ ವೆಲ್ವೆಟ್ ಸದ್ಯ ಲಭ್ಯವಿದೆ. ಸ್ಪೆಷಲ್ ಮೆನುಗಳಲ್ಲಿ ತಿರಮಿಸು, ಮಡೆಲೈನ್ಸ್, ಚೀಸ್ ಕೇಕ್ ಬ್ರೌನಿ, ಟ್ರೆಸ್ ಲೆಚೆಸ್ ಲಭ್ಯವಿದೆ.

ಪುನೀತ್ ರಾಜ್​ಕುಮಾರ್ ಅವರು ಶಿವಣ್ಣ ಪತ್ನಿ ಗೀತಾ ಅವರಲ್ಲಿ ಬ್ಯುಸಿನೆಸ್ ಶುರು ಮಾಡೋಕೆ ಹೇಳಿದ್ದರಂತೆ.  ಆದರೆ ಅವರಿಗೆ  ಐಡಿಯಾ ಇರದ ಕಾರಣ ಮಾಡಿರಲಿಲ್ಲ. ಈಗ ಅಪ್ಪು ಕನಸು ಮಗಳ ಮುಖಾಂತರ ನನಸಾಗಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!