ಕನ್ನಡ ಚಿತ್ರರಂಗದ ನೆಪೋಟಿಸಂ ಕುರಿತ ವಿವಾದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತೆರೆ ಎಳೆಯುವ ಯತ್ನ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ನೆಪೋಟಿಸಂ ಕುರಿತ ಪ್ರಶ್ನೆಗಳು ಕೇಳಿ ಬಂದಿದ್ದವು. ‘ಮ್ಯಾಂಗೋ ಪಚ್ಚ’ ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ಕುಮಾರ್, ‘ಚಿತ್ರರಂಗದಲ್ಲಿ ಅವಕಾಶ ಎಂಬುದು ಕುಟುಂಬದ ಹಿನ್ನೆಲೆಯಿಂದ ಅಲ್ಲ, ಪ್ರತಿಭೆ ಮತ್ತು ಸಾಮರ್ಥ್ಯದಿಂದ ಸಿಗುತ್ತದೆ. ಯಾರ ಮಕ್ಕಳು ಬೇಕಾದರೂ ಕನಸು ಕಾಣಬಹುದು. ಸಿನಿಮಾಗೆ ಬರಬಹುದು. ಇದು ಯಾರೊಬ್ಬರ ಸ್ವತ್ತೂ ಅಲ್ಲ. ಪ್ರತಿಯೊಬ್ಬರಿಗೂ ಅವಕಾಶ ಇದೆ. ಉಳಿಯುವುದು ಮಾತ್ರ ಪ್ರತಿಭೆಯಿಂದ’ ಎಂದು ಹೇಳಿದರು.
ಸುದೀಪ್ , ಶಿವಣ್ಣ ಅವರ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ‘ಗ್ರೇಟ್ನೆಸ್ ಅಂದ್ರೆ ಇದೇ. ಇದೇ ಪ್ರಶ್ನೆಯನ್ನು ಶಿವಣ್ಣ ಅವರಿಗೆ ಕೇಳಿದ್ರಲ್ಲ’ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.
ಶಿವರಾಜ್ಕುಮಾರ್ ಮತ್ತು ಸುದೀಪ್ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡ ಚಿತ್ರರಂಗದ ನೆಪೋಟಿಸಂ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿವೆ.
—–





Be the first to comment