ಮಲಯಾಳಂಗೆ ರುಕ್ಮಿಣಿ ವಸಂತ್ ಎಂಟ್ರಿ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೂಲಕ ಖ್ಯಾತಿ ಗಳಿಸಿರುವ ರುಕ್ಮಿಣಿ ವಸಂತ್  ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ.

ಮಲಯಾಳಂನ ಸ್ಟಾರ್ ನಟ ನಿವಿನ್ ಪೌಲಿ ಅಭಿನಯಿಸಲಿರುವ ಹೊಸ ರೊಮ್ಯಾಂಟಿಕ್ ಆಕ್ಷನ್ ಸಿನಿಮಾದಲ್ಲಿ ರುಕ್ಮಿಣಿ ನಾಯಕಿಯಾಗಿ ನಟಿಸಲಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲೂ ಈಗಾಗಲೇ ನಟಿಸಿರುವ ಅವರು  ಮಲಯಾಳಂ ಚಿತ್ರರಂಗದತ್ತ ಹೆಜ್ಜೆ ಇಟ್ಟಿದ್ದಾರೆ.

‘ಪ್ರೇಮಂ’ ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಿವಿನ್ ಪೌಲಿ ಜತೆಗೆ ರುಕ್ಮಿಣಿ ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು  ‘ಎನ್‌ವಿ51’ ಎಂದು ಕರೆಯಲಾಗುತ್ತಿದೆ. ನಶೀದ್ ಮೊಹಮ್ಮದ್ ಫೇಮಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.  ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.

ಆಗಸ್ಟ್ 9ರಂದು ಸಿನಿಮಾದ ಮುಹೂರ್ತ ನೆರವೇರಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಮಲಯಾಳಂನ  ಜನಪ್ರಿಯ ನಟ ಅಜು ವರ್ಗೀಸ್  ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಟಿನ್ ಪ್ರಕಟ್ ಫಿಲಮ್ಸ್ ಹಾಗೂ ಪೌಲ್ ಜೆಆರ್ ಫಿಲಮ್ಸ್ ಸಂಸ್ಥೆಗಳು ಸಿನಿಮಾಕ್ಕೆ ಬಂಡವಾಳ ಹೂಡುತ್ತಿವೆ.  ಇದೇ ವರ್ಷ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎನ್ನಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!