‘ದಯಾ ನಾಯಕ್’ ಸಿನಿಮಾ ಘೋಷಿಸಿದ ವರ್ಮಾ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ  ಮುಂಬೈಯ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ನೈಜ ಜೀವನದ ಪಾತ್ರದಿಂದ ಸಿನಿಮಾ ಪ್ರೇರಣೆ ಪಡೆದ ಹೊಸ ಸಿನಿಮಾ ‘ಪೋಲಿಸ್ ಕಂಪನಿ’ ಘೋಷಿಸಿದ್ದಾರೆ.

ಸಿನಿಮಾದಲ್ಲಿ ಖ್ಯಾತ ನಟ ಹರ್ಷವರ್ಧನ್ ರಾಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಘೋಷಣೆಯನ್ನು ರಾಮ್ ಗೋಪಾಲ್ ವರ್ಮಾ  ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ.

ದಾವೂದ್ ಮತ್ತು ಛೋಟಾ ರಾಜನ್ ನಡುವಿನ ಸಂಘರ್ಷದ ಪರಿಣಾಮ ಮುಂಬೈನಲ್ಲಿ ಅಪರಾಧ ಹೆಚ್ಚಾಗಿತ್ತು. 1997ರಿಂದ 2004ರವರೆಗೆ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್ ಪಡೆ  ಕೇವಲ 7ವರ್ಷಗಳಲ್ಲಿ 300ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್ ಮಾಡಿತು.  ಎನ್‌ಕೌಂಟರ್ ಪಡೆಯ ಕಾರ್ಯಾಚರಣೆ, ಅದರ ಹಿಂದೆ ಇದ್ದ ಅಧಿಕಾರಿಗಳು ಮತ್ತು ಮುಂಬೈ ಅಂಡರ್‌ವರ್ಲ್ಡ್‌ನೊಂದಿಗಿನ ಸಂಘರ್ಷದ ರೋಚಕ ಕಥೆಯನ್ನೇ ‘ಪೋಲಿಸ್ ಕಂಪನಿ’ ಸಿನಿಮಾದಲ್ಲಿ ಕಟ್ಟಿಕೊಡಲು ಆರ್‌ಜಿವಿ ಮುಂದಾಗಿದ್ದಾರೆ.

ದಯಾ ನಾಯಕ್ ಪಾತ್ರದಲ್ಲಿ ಹರ್ಷವರ್ಧನ್ ರಾಣೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇರಲಿದೆ ಎಂದು ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.

‘ಡಿ ಕಂಪನಿ’ ಮೂಲಕ ಮುಂಬೈ ಅಂಡರ್‌ವರ್ಲ್ಡ್‌ನ ಕಥೆಯನ್ನು ಕಟ್ಟಿಕೊಟ್ಟಿದ್ದ ರಾಮ್ ಗೋಪಾಲ್ ವರ್ಮಾ, ಎನ್‌ಕೌಂಟರ್ ಪಡೆಯ ಕಾರ್ಯಾಚರಣೆಯನ್ನು ತೆರೆಗೆ ತರುತ್ತಿರುವುದು  ಕುತೂಹಲ ಹೆಚ್ಚಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!