‘ಟಾಕ್ಸಿಕ್’ ಸಿನಿಮಾದ ಟ್ರೈಲರ್‌ಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿರುವ ನಡುವೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ಕನ್ನಡ ನಟಿ ರಿಷಿಕಾ ಸಿಂಗ್ ಟ್ರೈಲರ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಹೆಣ್ಮಕ್ಕಳಿಗೆ ಗೌರವ ಕೊಡಬೇಕು.ಇಲ್ಲದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ’ ಎಂದು ಯಶ್ ಅವರನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
‘ಹೆಣ್ಮಕ್ಕಳಿಗೆ ಅಂದ ಇದ್ದರೆ ಚಂದ. ಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚೆಂದ. ಮನೆಯಲ್ಲಿ ಹೆಂಡತಿ ಇದ್ದೂ ಹೀರೋಯಿನ್‌ಗಳ ಜೊತೆ ಹೀಗೆ ಕಾಣಿಸಿಕೊಳ್ಳುವುದು ಸರಿಯಲ್ಲ. ಹೆಣ್ಮಕ್ಕಳಿಗೆ ಗೌರವ ಇರಲಿ. ಇಲ್ಲದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ. ಐ ಆಮ್ ಟಾಕ್ಸಿಕ್’ ಎಂದು ರಿಷಿಕಾ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ನೆಟ್ಟಿಗರು ರಿಷಿಕಾ ಹೇಳಿಕೆಯನ್ನು ಟೀಕಿಸಿದ್ದಾರೆ. ‘ಸಿನಿಮಾದ ನಟಿಯರೇ ವೇದಿಕೆಯಲ್ಲಿ ಯಶ್ ಜೊತೆ ಕೆಲಸ ಮಾಡಿದ್ದು ಸಂತೋಷ ಎಂದು ಹೇಳಿದ್ದಾರೆ. ಚಿತ್ರತಂಡದ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ. ಹಾಗಿದ್ದರೆ ಸಮಸ್ಯೆ ಏನು?’ ನಟಿಯರು ಒಪ್ಪಂದದ ಪ್ರಕಾರವೇ ಸಿನಿಮಾದಲ್ಲಿ ನಟಿಸಿದ್ದು, ಅದರ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವರು ರಿಷಿಕಾ ಸಿಂಗ್ ಅವರ ಹಳೆಯ ಸಿನಿಮಾಗಳ ಬಿಕಿನಿ ದೃಶ್ಯಗಳ ಫೋಟೋಗಳನ್ನು ಹಂಚಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಸಂಸ್ಕಾರವೇ?’ ಎಂದು ಪ್ರಶ್ನಿಸಿದ್ದಾರೆ. ಯಶ್ ವಿರುದ್ಧದ ಹೇಳಿಕೆಗೆ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
—–





Be the first to comment