ಮೇ 10ಕ್ಕೆ ‘RRR’ ಮರು ಬಿಡುಗಡೆ

ಜೂನಿಯರ್ ಎನ್ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ತೆಲುಗು ಚಿತ್ರ ‘RRR’ ಮೇ 10ಕ್ಕೆ ಮರು ಬಿಡುಗಡೆಯಾಗಲಿದೆ.

ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದಾರೆ.  ಜೂನಿಯರ್ ಎನ್ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯ ಮಾರಿಸ್, ರಾಯ್ ಸ್ಟೀವನ್ ಸನ್, ಛತ್ರಪತಿ ಶೇಖರ್, ಮಕರಂದ್ ದೇಶಪಾಂಡೆ, ರಾಹುಲ್ ರಾಮಕೃಷ್ಣ ತೆರೆ ಹಂಚಿಕೊಂಡಿದ್ದಾರೆ.

ಶ್ರೀಕಾರ್ ಪ್ರಸಾದ್ ಸಂಕಲನ, ಸೆಂಥಿಲ್ ಕುಮಾರ್ ಛಾಯಾಗ್ರಣವಿದೆ. ಡಿ ವಿ ವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಡಿ ವಿ ವಿ ದಾನಯ್ಯ ನಿರ್ಮಾಣ ಮಾಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ.

 ‘RRR’ 2022 ಮಾರ್ಚ್ 22 ರಂದು ವಿಶ್ವದಾದ್ಯಂತ ತೆರೆ ಕಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆಯಿತು.  ಸಿನಿಮಾ ಇದೀಗ ಮತ್ತೆ ಮೇ ಹತ್ತಕ್ಕೆ ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!