‘‘ರಿಚರ್ಡ್ ಆ್ಯಂಟನಿ’ ನ್ಯೂಕ್ಲಿಯರ್ ಬಾಂಬ್‌ನಂತೆ ಸದ್ದು’

ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ರಿಚರ್ಡ್ ಆ್ಯಂಟನಿ’ ನ್ಯೂಕ್ಲಿಯರ್ ಬಾಂಬ್‌ನಂತೆ ಸದ್ದು ಮಾಡಲಿದೆ  ಎಂದು  ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

‘ಚಿತ್ರದ ಕೆಲಸ ಆರಂಭಕ್ಕೆ ಇಡೀ ತಂಡ ಸಜ್ಜಾಗಿದ್ದು, ಶೂಟಿಂಗ್ ಆರಂಭವಾಗುವುದು ಮಾತ್ರ ಬಾಕಿಯಿದೆ. ನಾನು ರೆಡಿ, ರಕ್ಷಿತ್ ಶೆಟ್ಟಿ ರೆಡಿ, ಇಡೀ ತಂಡ ರೆಡಿ. ಚಿತ್ರದ ಪ್ರತಿಯೊಬ್ಬ ತಂತ್ರಜ್ಞರೂ ಈ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳೂ ಕಾಯುತ್ತಿದ್ದಾರೆ” ಎಂದು  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಅಜನೀಶ್  ತಿಳಿಸಿದ್ದಾರೆ.

‘ತ್ ಶೆಟ್ಟಿ ಅತ್ಯಂತ ದೊಡ್ಡ ಕಲ್ಪನೆ ಮತ್ತು ಭಿನ್ನ ದೃಷ್ಟಿಕೋನದೊಂದಿಗೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ರಿಚರ್ಡ್ ಆ್ಯಂಟನಿ’ ಸಿನಿಮಾ ಬಿಡುಗಡೆಯಾದಾಗ ಅದು ಸಾಮಾನ್ಯ ಸಿನಿಮಾ ಆಗಿರುವುದಿಲ್ಲ. ಅದು ನ್ಯೂಕ್ಲಿಯರ್ ಬಾಂಬ್‌ನಂತೆ ಸದ್ದು ಮಾಡಲಿದೆ’ ಎಂದು ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಸೂಪರ್‌ಹಿಟ್ ಸಿನಿಮಾ ‘ಉಳಿದವರು ಕಂಡಂತೆ’ ಚಿತ್ರದ ಮುಂದುವರಿದ ಭಾಗವಾಗಿ ಮೂಡಿಬರುತ್ತಿರುವ ‘ರಿಚರ್ಡ್ ಆ್ಯಂಟನಿ’, ಅದೇ ಚಿತ್ರದ ಜನಪ್ರಿಯ ‘ರಿಚ್ಚಿ’ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಸಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!