‘ರಾಮಾಯಣ’ ಟ್ರೈಲರ್‌ಗೆ ‘U’ ಪ್ರಮಾಣಪತ್ರ

ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ ಟ್ರೈಲರ್‌ಗೆ ಸೆನ್ಸಾರ್ ಮಂಡಳಿ ‘U’ ಪ್ರಮಾಣಪತ್ರ ನೀಡಿದೆ.

ನಾಲ್ಕು ನಿಮಿಷಕ್ಕೂ ಅಧಿಕ ಅವಧಿಯ ಟ್ರೈಲರ್ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ.  ಚಿತ್ರತಂಡ ಎರಡು ವಿಭಿನ್ನ ಟ್ರೈಲರ್‌ಗಳನ್ನು ಸೆನ್ಸಾರ್‌ಗೆ ಸಲ್ಲಿಸಿತ್ತು. ‘Trailer – Ramayana 3D’ ಎಂಬ ಹೆಸರಿನ ಟ್ರೈಲರ್‌ 4 ನಿಮಿಷ 15 ಸೆಕೆಂಡುಗಳ ಅವಧಿ ಹೊಂದಿದ್ದರೆ, ‘Theatrical Trailer – Ramayana 3D’ ಟ್ರೈಲರ್‌ 4 ನಿಮಿಷಗಳ ಅವಧಿಯಾಗಿದೆ. ಎರಡಕ್ಕೂ ‘U’ ಪ್ರಮಾಣಪತ್ರ ದೊರೆತಿದೆ.

ಚಿತ್ರಮಂದಿರಗಳಲ್ಲಿ ಜಾಹೀರಾತು ರೂಪದಲ್ಲಿ ಪ್ರದರ್ಶನಗೊಳ್ಳುವ ಟ್ರೈಲರ್‌ಗಳಿಗೆ  ಸಿಬಿಎಫ್‌ಸಿ ಅನುಮತಿ ಕಡ್ಡಾಯ.  ‘ರಾಮಾಯಣ’ ಟ್ರೈಲರ್ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಪ್ರದರ್ಶನವಾಗಲಿದೆ. ಈಗಾಗಲೇ ಬಿಡುಗಡೆಯಾದ  ಮೊದಲ ಟೀಸರ್ ಹಾಗೂ ಹನುಮ ಜಯಂತಿಯಂದು ಬಿಡುಗಡೆಯಾದ ‘ರಾಮ’ ಟೀಸರ್ ಭಾರಿ ಮೆಚ್ಚುಗೆ ಪಡೆದಿದೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಮೊದಲ ಭಾಗ 2026ರ ದೀಪಾವಳಿ, ಎರಡನೇ ಭಾಗ 2027ರ ದೀಪಾವಳಿಗೆ ತೆರೆ ಕಾಣಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮ, ಸಾಯಿ ಪಲ್ಲವಿ ಸೀತೆ, ಯಶ್ ರಾವಣ, ಸನ್ನಿ ಡಿಯೋಲ್ ಹನುಮಂತ, ರವಿ ದುಬೆ ಲಕ್ಷ್ಮಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಝೀಮರ್ ಸಂಗೀತ ನೀಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!