ಕನ್ನಡಕ್ಕೆ ಮರಳಿದ ರವೀನಾ ಟಂಡನ್

ಶಿವರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಎ ಫಾರ್ ಆನಂದ್’ ಚಿತ್ರದ  ಮೂಲಕ ನಟಿ ರವೀನಾ ಟಂಡನ್  ಮತ್ತೆ ಕನ್ನಡಕ್ಕೆ ಮರಳಿದ್ದಾರೆ.

‘ಎ ಫಾರ್ ಆನಂದ್’ ಚಿತ್ರದೊಂದಿಗೆ ರವೀನಾ ಟಂಡನ್ ಮತ್ತು ಶಿವರಾಜ್‌ಕುಮಾರ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಎಂಜಿ ಶ್ರೀನಿವಾಸ್ (ಶ್ರೀನಿ) ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಆವರಣದಲ್ಲಿ ನಡೆದ ಚಿತ್ರೀಕರಣದ ಮೊದಲ ದಿನ ರವೀನಾ ‘ಎ ಫಾರ್ ಆನಂದ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ  ರವೀನಾ ಟಂಡನ್ ,  ಉಪೇಂದ್ರ’ (1999) ಚಿತ್ರದ ಮೂಲಕ ಆರಂಭವಾದ  ರವೀನಾ ಟಂಡನ್ ಅವರ ಕನ್ನಡ ಚಿತ್ರದ  ಪಯಣ, ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮುನ್ನೆಲೆಗೆ ಬಂದಿತು.

ಶಿವರಾಜ್‌ಕುಮಾರ್ ಅವರೊಂದಿಗೆ ‘ಘೋಸ್ಟ್’ ಚಿತ್ರ ನಿರ್ದೇಶಿಸಿದ್ದ ಶ್ರೀನಿ  ‘ಎ ಫಾರ್ ಆನಂದ್’ ಚಿತ್ರಕ್ಕೆ  ಬೃಹತ್ ತಾರಾಗಣವನ್ನು ಕರೆತರುತ್ತಿದ್ದಾರೆ. ನವೆಂಬರ್ 27 ರಂದು ಬಿಡುಗಡೆಯಾಗಲಿರುವ ‘ಬೀರ್‌ಬಲ್ 2’ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಅವರ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಎ ಫಾರ್ ಆನಂದ್’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!