ನಿರ್ದೇಶನಕ್ಕೆ ಮರಳಿದ ರಾಜ್ ಶೆಟ್ಟಿ

ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶನದ ಮುಂದಿನ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 30 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಪೂರ್ಣಗೊಂಡಿದೆ.

ಚಿತ್ರೀಕರಣ ಪೂರ್ಣಗೊಂಡ ನಂತರ ಚಿತ್ರದ ಶೀರ್ಷಿಕೆ, ನಿರ್ಮಾಣದ ವಿವರಗಳು ಹಾಗೂ ಸಂಪೂರ್ಣ ತಾರಾಗಣ ಮತ್ತು ತಾಂತ್ರಿಕ ತಂಡದ ಕುರಿತು ಅಧಿಕೃತ ಘೋಷಣೆಯನ್ನು ಹೊರಡಿಸಲು ಚಿತ್ರತಂಡ ಯೋಜಿಸಿದೆ. ಈ ಹೊಸ ಯೋಜನೆಯು ಕರಾವಳಿ ಕರ್ನಾಟಕದ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.

ಒಂದು ಮೊಟ್ಟೆಯ ಕಥೆ’ (2017),  ‘ಗರುಡ ಗಮನ ವೃಷಭ ವಾಹನ’ (2021) ನಿರ್ದೇಶನ  ನಂತರ ರಾಜ್ ಬಿ ಶೆಟ್ಟಿ  ‘ಟೋಬಿ’ (2023) ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದರು.  ಅವರ ನಿರ್ದೇಶನದ ಕೊನೆಯ ಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (2023) ಆಗಿತ್ತು.

‘ಸು ಫ್ರಮ್ ಸೋ’ ಚಿತ್ರವನ್ನು ನಿರ್ಮಿಸಿ, ನಟಿಸಿದ್ದ ರಾಜ್ ಶೆಟ್ಟಿ ‘ಬಂದರ್’ ಚಿತ್ರದ ಮೂಲಕ  ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟರು. ಅರ್ಜುನ್ ಜನ್ಯ ನಿರ್ದೇಶನದ ’45’ ಚಿತ್ರದಲ್ಲಿ  ನಟಿಸಿದರು. ಲ್ಯಾಂಡ್‌ಲಾರ್ಡ್ ಚಿತ್ರದಲ್ಲಿ ಖಳನಾಯಕನ ಪಾತ್ರ, ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಚಿತ್ರದಲ್ಲೂ ನಟಿಸಿದರು. ಇತ್ತೀಚೆಗೆ ಗುರುದತ್ತ ಗಾಣಿಗ ಅವರ ‘ಕರಾವಳಿ’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ರಾಜ್ ಬಿ ಶೆಟ್ಟಿ ಅವರು ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ‘ಪಾಕೆಟ್ ನಾವೆಲ್’  ತಮಿಳು  ಚಿತ್ರದಲ್ಲಿ ನಟಿಸಿದ್ದಾರೆ.  ಮತ್ತೊಂದು ತಮಿಳು ಚಿತ್ರ ‘ಸೆಯಾನ್’ ಸೇರಿದಂತೆ ಇತರ ಕೆಲವು ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!