‘ಶಾಂತಿ-ಕ್ರಾಂತಿ’ ಮರುಬಿಡುಗಡೆಗೆ ಸಮಸ್ಯೆ

 ‘ಶಾಂತಿ-ಕ್ರಾಂತಿ’ ಸಿನಿಮಾದ ನಟ, ನಿರ್ದೇಶಕ ರವಿಚಂದ್ರನ್ ಅವರು  ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆಗೆ ಇರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಫಾದರ್ಸ್ ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ  ಮಾತನಾಡಿದ ರವಿಚಂದ್ರನ್, ‘ಸಿನಿಮಾ ಬಿಡುಗಡೆ ಮಾಡುವುದು ನನ್ನ ತಮ್ಮನ ಕೈಯಲ್ಲಿದೆ.  ಆ ಸಿನಿಮಾಕ್ಕೆ ಆತನೇ ಪ್ರೊಪರೇಟರ್. ಸಿನಿಮಾದ ಮರು ಬಿಡುಗಡೆ ಮಾಡಲು ಇರುವ  ಸಮಸ್ಯೆ ಎಂದರೆ ಆ ಸಿನಿಮಾದ ನೆಗೆಟಿವ್​​ಗಳು ಈಗ ಇಲ್ಲ. ಪ್ರಸಾದ್ ಲ್ಯಾಬ್ ಅಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾದ ನೆಗೆಟಿವ್​​ಗಳು ಇದ್ದವು. ಆದರೆ 25 ವರ್ಷಕ್ಕೂ ಹೆಚ್ಚು ಅವಧಿ ಆಗಿದ್ದರಿಂದ ಅದೆಲ್ಲ ಕರಗಿ ಹಾಳಾಗಿವೆ’ ಎಂದಿದ್ದಾರೆ.

‘ಶಾಂತಿ-ಕ್ರಾಂತಿ’ ಸಿನಿಮಾದ ನೆಗೆಟಿವ್​​ಗಳು ಇವೆ ಎಂದು ಹುಡಕಬೇಕು. ಅವನ್ನು  ತಂತ್ರಜ್ಞಾನ ಬಳಸಿ  ರಿಟ್ರೀವ್ ಮಾಡಬೇಕು ಅದಕ್ಕೆಲ್ಲ ಬಹಳ ಟೈಂ ಹಿಡಿಯುತ್ತದೆ.  ಅಲ್ಲದೆ ಮತ್ತೆ 2 ರಿಂದ 3 ಕೋಟಿ ರೂಪಾಯಿ ಹಣವನ್ನೂ  ನಾವು ಹೂಡಿಕೆ ಮಾಡಬೇಕಾಗುತ್ತದೆ. ಸಿನಿಮಾದ ಸಂಗೀತವನ್ನು ಮತ್ತೆ ಮಾಡಿಸಬೇಕು.  ಆಗಿನ ಕಾಲಕ್ಕೆ ಬಹು ದೊಡ್ಡ ಆರ್ಕೆಸ್ಟ್ರಾ ನಾವು ಅರೇಂಜ್ ಮಾಡಿಸಿದ್ದೆವು’ ಎಂದು ಹೇಳಿದ್ದಾರೆ.

‘ಶಾಂತಿ-ಕ್ರಾಂತಿ’ ಸಿನಿಮಾ  ರೀ-ರಿಲೀಸ್ ಮಾಡಿ ಎಂದು ಸಿನಿಮಾ ಪ್ರೇಮಿಗಳು ಬೇಡಿಕೆ ಇಡುತ್ತಿದ್ದಾರೆ. ಮೊದಲು ಬಿಡುಗಡೆ ಆಗಿ  ಸೋತಿದ್ದ  ‘ಶಾಂತಿ-ಕ್ರಾಂತಿ’ ಸಿನಿಮಾವನ್ನು ಈಗ ಗೆಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳು ಹರಿದಾಡುತ್ತಿವೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!