‘ರಾಮಾಯಣ’ ತೆಲುಗು ಹಕ್ಕುಗಳಿಗೆ ಬಿಗ್ ಆಫರ್

ಯಶ್  ನಟನೆಯ ‘ರಾಮಾಯಣ’ ಚಿತ್ರದ ತೆಲುಗು ರಾಜ್ಯಗಳ ಥಿಯೇಟ್ರಿಕಲ್ ಹಕ್ಕುಗಳಿಗೆ  ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು, ನಿರ್ಮಾಪಕರಿಗೆ   105 ಕೋಟಿ ಆಫರ್ ನೀಡಿದ್ದಾರೆ.

ಚೆನ್ನೈನಲ್ಲಿ ವಿತರಕರಿಗಾಗಿ ಆಯೋಜಿಸಿದ್ದ ‘ರಾಮಾಯಣ’ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ದಿಲ್ ರಾಜು, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಳಿಕ ತೆಲುಗು ರಾಜ್ಯಗಳ ಥಿಯೇಟ್ರಿಕಲ್ ಹಕ್ಕುಗಳಿಗೆ ಸುಮಾರು  105 ಕೋಟಿ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಈ ಒಪ್ಪಂದ  ರಿಟರ್ನಬಲ್ ಅಡ್ವಾನ್ಸ್ ಮಾದರಿಯಲ್ಲೇ ನಡೆಯುವ ಸಾಧ್ಯತೆಯಿದೆ.

ಚಿತ್ರದ ಹಿಂದಿ ಆವೃತ್ತಿಯ ವಿತರಣೆ ಹಕ್ಕುಗಳನ್ನು ಕರಣ್ ಜೋಹರ್ ಸುಮಾರು ₹250 ಕೋಟಿಗೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹಿಂದಿ ಮಾರುಕಟ್ಟೆಯ ಗಾತ್ರಕ್ಕೆ ಹೋಲಿಸಿದರೆ ತೆಲುಗು ರಾಜ್ಯಗಳಿಗೆ  05 ಕೋಟಿಯ ಆಫರ್ ದೊಡ್ಡ ಮೊತ್ತವಾಗಿದೆ.  ಕೆಲ ಬಾಕ್ಸ್ ಆಫೀಸ್ ವಿಶ್ಲೇಷಕರು ಇದನ್ನು ಭಾರಿ ರಿಸ್ಕ್ ಎಂದು ಪರಿಗಣಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದ ತೆಲುಗು ರಾಜ್ಯಗಳ ವಿತರಣೆ ಹಕ್ಕುಗಳನ್ನು ದಿಲ್ ರಾಜು ರಿಟರ್ನಬಲ್ ಆಧಾರದ ಮೇಲೆ ಪಡೆದುಕೊಂಡಿದ್ದರು. ಆರಂಭದಲ್ಲಿ 108 ಕೋಟಿ ಮೊತ್ತದ ಮಾತುಕತೆ ನಡೆದಿದ್ದರೂ ಬಳಿಕ 80 ಕೋಟಿಗೆ ಪರಿಷ್ಕರಿಸಲಾಗಿತ್ತು. ಅಂತಿಮ ಹಂತದಲ್ಲಿ  75 ಕೋಟಿ ಪಾವತಿಸಲಾಗಿದೆ ಎನ್ನಲಾಗಿದೆ.

ಪ್ಯಾನ್-ಇಂಡಿಯಾ ಸಿನಿಮಾಗಳ ಮಾರುಕಟ್ಟೆ ಸಾಮರ್ಥ್ಯದ ಮೇಲೆ ದಿಲ್ ರಾಜು ಇಟ್ಟಿರುವ ವಿಶ್ವಾಸ  ಈ ಬಿಗ್ ಆಫರ್‌ನ ಹಿಂದಿನ ಪ್ರಮುಖ ಕಾರಣ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಅನುಭವದ ಬೆನ್ನಲ್ಲೇ ‘ರಾಮಾಯಣ’ಕ್ಕೆ ಅವರು  ದೊಡ್ಡ ಮೊತ್ತದ ಪಂತು ಕಟ್ಟಿರುವುದು  ಚಿತ್ರರಂಗದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!