ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನ ಆಘಾತ ಎದುರಾಗಿದ್ದು, ಕಾರ್ಮೋಡ ಕವಿದಿದೆ.
ಸೆಪ್ಟೆಂಬರ್ 6 ರಂದು ಶೋ ಶುರುವಾಗುವುದೇ ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಅರಣ್ಯ ಹಾಗೂ ಪರಿಸರ ಸಚಿವರ ಕಠಿಣ ನಿಲುವು ಕಾರಣವಾಗಿದೆ.
ನಿನ್ನೆ ಕಲರ್ಸ್ ಕನ್ನಡದ ಬಿಗ್ಬಾಸ್ ತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿತು. ಇದರ ಬೆನ್ನಲ್ಲೇ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಕಳೆದ ವರ್ಷದಂತೆ ಈ ಬಾರಿ ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮಗಳ ಉಲ್ಲಂಘಸಿದೆ ಎಂದು ಹೇಳುವ ಮೂಲಕ ಬಿಗ್ ಬಾಸ್ ಶೋ ಆಯೋಜಕರಿಗೆ ಮತ್ತು ಸ್ಟುಡಿಯೋ ಮಾಲೀಕರಿಗೆ ಶಾಕ್ ನೀಡಿದ್ದಾರೆ.
‘ಜಾಲಿವುಡ್ ಸ್ಟುಡಿಯೋ ಕಳೆದ ವರ್ಷದ ದಂಡವನ್ನು ಇನ್ನೂ ಪಾವತಿಸಿಲ್ಲ. ಪರಿಸರ ನಿಯಮಗಳನ್ನು ಸರಿಪಡಿಸಿಕೊಂಡಿಲ್ಲ.ಎಸ್ಟಿಪಿ ಅಳವಡಿಕೆ ನಿಯಮಗಳನ್ನು ಪಾಲಿಸಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿಕೊಳ್ಳದೆ ಹೋದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ’ ಎಂದು ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ಪರಿಸರ ಉಲ್ಲಂಘನೆ ಮತ್ತು ಕಾನೂನು ತೊಡಕುಗಳಿಂದಾಗಿ ಬಿಗ್ ಬಾಸ್ ಶೂಟಿಂಗ್ ಹಾಗೂ ಪ್ರಸಾರಕ್ಕೆ ತೊಂದರೆಯಾಗಿತ್ತು. ಈಗ ಮತ್ತೊಮ್ಮೆ ಅದೇ ಸಮಸ್ಯೆ ಎದುರಾಗಿದೆ.
—–





Be the first to comment