ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ?

ಭಾರತ ರತ್ನ ಪುರಸ್ಕೃತ ಹಾಗೂ ಖ್ಯಾತ ಕರ್ನಾಟಕ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಲ್ಲಿ ಪ್ರಮುಖ ಪಾತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ಕೇಳಿ ಬರುತ್ತಿದೆ.

ಖ್ಯಾತ ನಿರ್ದೇಶಕ ಗೌತಮ್ ತಿನ್ನಮುರಿ ಬಯೋಪಿಕ್‌ನ್ನು ನಿರ್ದೇಶಿಸಲಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರ ಲುಕ್ ಟೆಸ್ಟ್  ನಡೆದಿರುವ ಬಗ್ಗೆ ಸಿನಿ ವಲಯದಲ್ಲಿ ಮಾತುಗಳು ಹರಿದಾಡುತ್ತಿವೆ.

ಈ ಕುರಿತು ಚಿತ್ರತಂಡ ಅಥವಾ ನಿರ್ದೇಶಕರಿಂದ ಯಾವುದೇ ಅಧಿಕೃತ ಘೋಷಣೆ ಹೊರ ಬಂದಿಲ್ಲ. ಬಯೋಪಿಕ್‌ಗೆ ಸಂಬಂಧಿಸಿದಂತೆ ಹಲವು ನಟಿಯರ ಹೆಸರುಗಳು ಕೇಳಿ ಬಂದಿದ್ದವು. ಆರಂಭದಲ್ಲಿ ಸಾಯಿ ಪಲ್ಲವಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಪಾತ್ರಕ್ಕಾಗಿ ಅವರು ಕರ್ನಾಟಕ ಸಂಗೀತದ ತರಬೇತಿ ಪಡೆಯುತ್ತಿದ್ದಾರೆ ಹಾಗೂ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಹಳೆಯ ವಿಡಿಯೊಗಳು ಮತ್ತು ಸಂಗೀತ ದಾಖಲೆಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಎಂಬ ಸುದ್ದಿ  ಹರಿದಾಡಿದ್ದವು.

ನಂತರ ನಟಿ ರುಕ್ಮಿಣಿ ವಸಂತ್ ಅವರ ಹೆಸರೂ ಈ ಯೋಜನೆಗೆ ಸಂಬಂಧಿಸಿ ಕೇಳಿ ಬಂದಿತ್ತು. ಈಗ ರಶ್ಮಿಕಾ ಮಂದಣ್ಣ ಅವರ ಹೆಸರು ಕೇಳಿ ಬಂದಿರುವುದರಿಂದ ಬಯೋಪಿಕ್ ಕುರಿತ ನಿರೀಕ್ಷೆಗಳು ಹೆಚ್ಚಿವೆ. ಪಾತ್ರ ಆಯ್ಕೆ ಕುರಿತು ಅಧಿಕೃತ ಘೋಷಣೆಗೆ ಅಭಿಮಾನಿಗಳು  ಕಾಯುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!