ರಾಕೇಶ್ ಅಡಿಗ ನಿಶ್ಚಿತಾರ್ಥ

ಬಿಗ್‌ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಅವರು ಮಾಧುರಿ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ ಸಂಭ್ರಮದ ಕ್ಷಣಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಪ್ಪು ಬಣ್ಣದ ಶೆರ್ವಾನಿಯಲ್ಲಿ ರಾಕೇಶ್ ಮಿಂಚುತ್ತಿದ್ದು, ಕ್ರೀಮ್ ಬಣ್ಣದ ಲೆಹೆಂಗಾ ಧರಿಸಿದ್ದ ಮಾಧುರಿ ಅವರಿಗೆ ಉಂಗುರ ತೊಡಿಸಿದ್ದಾರೆ.  ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿರುವ ಕ್ಷಣವೂ ಫೋಟೋಗಳಲ್ಲಿ ಸೆರೆಯಾಗಿದೆ.

ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದ್ದು, ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇತ್ತೀಚೆಗೆ ತಮ್ಮ ಮದುವೆ ಹಾಗೂ ಜೀವನ ಸಂಗಾತಿಯ ಬಗ್ಗೆ ರಾಕೇಶ್ ಅಡಿಗ ಮಾತನಾಡಿದ್ದರು. ”ತಮ್ಮ  ಬದುಕಿನಲ್ಲಿ  ಅಗತ್ಯವಿರುವ ವ್ಯಕ್ತಿ ದೊರೆತಿದ್ದಾರೆ. ನಾನು ಉತ್ತಮ ವ್ಯಕ್ತಿಯಾಗಲು ಯಾವ ರೀತಿಯ ಸಂಗಾತಿ ಬೇಕೋ, ಅಂತಹ ಹುಡುಗಿ ಸಿಕ್ಕಿದ್ದಾರೆ” ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ರಾಕೇಶ್ ಅಡಿಗ  2009ರಲ್ಲಿ ತೆರೆಕಂಡ ‘ಜೋಶ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.  ಬಳಿಕ ‘ಮನಸಾಲಜಿ’, ‘ಪರಿ’, ‘ಯಾರೇ ಕೂಗಾಡಲಿ’, ‘ನಂದ ಗೋಕುಲ’, ‘ಮಂದಹಾಸ’, ‘ಕರ್ನಾಟಕ ಅಯೋಧ್ಯಪುರಂ’, ‘ಕೋಟಿಗೊಬ್ಬ ಲವ್ ಸ್ಟೋರಿ’, ‘ಪ್ರೀತಿಯಿಂದ’, ‘ಮಂಡ್ಯ ಟು ಮುಂಬೈ’, ‘ನಟೋರಿಯಸ್’, ‘ಡವ್’ ಹಾಗೂ ‘ನೈಟ್ ಔಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ಅಭಿನಯದ ‘ಅಲೆಮಾರಿ’ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದರು.

‘ಬಿಗ್‌ಬಾಸ್‌’ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇತ್ತೀಚೆಗೆ ‘ನಾನು ಮತ್ತು ಗುಂಡ 2’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!