ಸಿನಿಮಾದ ನಾಯಕಿಯನ್ನೇ ಮದುವೆ ಆಗುತ್ತಿರುವ ನಟ

ಕಿರುತೆರೆಯ ಜನಪ್ರಿಯ ನಟ ರಾಜೇಶ್ ಧ್ರುವ ಅವರು ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರದ ನಾಯಕಿ ರಾಧಿಕಾ ಅಚ್ಯುತ ರಾವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕುಟುಂಬದ ಹಿರಿಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ರಾಜೇಶ್ , ರಾಧಿಕಾ ಅಚ್ಯುತ ರಾವ್ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಸಂತಸದ ಸುದ್ದಿಯನ್ನು ರಾಜೇಶ್ ಧ್ರುವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

”ನನ್ನ ಮೊದಲ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದಾಗ ಪರಿಚಯವಾದವರೇ ಮುಂದೆ ನನ್ನ ಜೀವನ ಸಂಗಾತಿಯಾಗುತ್ತಾರೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅಂದು ನಾಯಕಿಯಾಗಿ ಪರಿಚಯಿಸಿದ್ದ ರಾಧಿಕಾ ಅವರನ್ನು ಇಂದು ನನ್ನ ಧರ್ಮಪತ್ನಿಯಾಗಲಿರುವ ಸಂಗಾತಿಯಾಗಿ ಮತ್ತೆ ಪರಿಚಯಿಸುತ್ತಿದ್ದೇನೆ. ಸಿನಿಪಯಣದಿಂದ ಬಾಳಪಯಣದತ್ತ ಹೆಜ್ಜೆ ಇಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ” ಎಂದು ರಾಜೇಶ್ ಧ್ರುವ ನಿಶ್ಚಿತಾರ್ಥದ ಸುದ್ದಿ ಹಂಚಿಕೊಂಡಿದ್ದಾರೆ.

ರಾಜೇಶ್ ಧ್ರುವ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ನವಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಶಿರಸಿಯವರಾದ ರಾಜೇಶ್ ಧ್ರುವ,  ರಾಧಿಕಾ ಅಚ್ಯುತ ರಾವ್  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶಾರದೆ’ ಧಾರಾವಾಹಿಯಲ್ಲೂ  ಒಟ್ಟಿಗೆ ನಟಿಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!