‘ಮೂಕುತಿ ಅಮ್ಮನ್ 2’ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕನ್ನಡದ ನಟ ದುನಿಯಾ ವಿಜಯ್ ಅವರನ್ನು ತಮಿಳು ನಟ ಬೈಲ್ವಾನ್ ರಂಗನಾಥನ್ ಹಂದಿಗೆ ಹೋಲಿಕೆ ಮಾಡಿದ್ದಾರೆ.
ಹಾಸ್ಯ ನಟ ಬಯಿಲ್ವಾನ್ ರಂಗನಾಥ್ ಯೂಟ್ಯೂಬ್ ಪಾಡ್ಕಾಸ್ಟ್ ಒಂದರಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಬಗ್ಗೆ ಮಾತನಾಡುತ್ತಾ ವಿಜಯ್ ಅವರನ್ನು ಹಂದಿಯನ್ನು ಹೋಲುವ ವ್ಯಕ್ತಿ ಎಂದಿದ್ದಾರೆ. ವಿಜಯ್ ಅವರ ದೇಹದ ಆಕಾರ ಹಾಗೂ ಲುಕ್ ಬಗ್ಗೆ ಕೀಳಾಗಿ ಬಾಡಿ ಶೇಮಿಂಗ್ ಹೇಳಿಕೆ ನೀಡಿದ್ದಾರೆ.
ಬಯಿಲ್ವಾನ್ ರಂಗನಾಥ್ ಕೆಲ ತಮಿಳು ಸಿನಿಮಾನಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಾರೆ. ರಂಗನಾಥ್, ದುನಿಯಾ ವಿಜಯ್ ನಮ್ಮ ಯೋಗಿಬಾಬುಗಿಂತಲೂ ಕಡೆಯಾಗಿದ್ದಾನೆ ಎಂದಿದ್ದಾರೆ. ಸಂದರ್ಶಕ ಬಾಡಿ ಶೇಮಿಂಗ್ ಮಾಡಬೇಡಿ ಎಂದರೂ ಕೇಳದೆ ಬೈಲ್ವಾನ್ ರಂಗನಾಥನ್ ತಮ್ಮ ವರಾತ ಮುಂದುವರೆಸಿ ಕೀಳಾಗಿ ಮಾತನಾಡಿದ್ದಾರೆ.
ದುನಿಯಾ ವಿಜಯ್ ಬಗ್ಗೆ ಬಯಿಲ್ವಾನ್ ರಂಗನಾಥ್ ಕೀಳು ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಬಯಿಲ್ವಾನ್ ರಂಗನಾಥ್ ಆಡಿರುವ ಮಾತುಗಳನ್ನು ವಿರೋಧಿಸಿ ಕ್ಷಮೆಗೆ ಒತ್ತಾಯಿಸಿದ್ದಾರೆ.
—





Be the first to comment