ಮೇ 1ಕ್ಕೆʻಪುಷ್ಪ 2ʼ ಸಾಂಗ್‌ ಬಿಡುಗಡೆ

ಬಹುನಿರೀಕ್ಷಿತ ‘ಪುಷ್ಪ: ದಿ ರೂಲ್’  ಸಿನಿಮಾದ ಮೊದಲ ಹಾಡು ‘ಪುಷ್ಪ ಪುಷ್ಪ’ ಮೇ 1ರಂದು ಬಿಡುಗಡೆಯಾಗಲಿದೆ.

ಈ ಬಗ್ಗೆ ಅಲ್ಲು ಅರ್ಜುನ್‌  ಸೋಷಿಯಲ್‌ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ‘ಪುಷ್ಪ ಪುಷ್ಪ’ ಟ್ರ್ಯಾಕ್‌ನ ಟೀಸರ್‌ ಶೇರ್‌ ಮಾಡಿದ್ದಾರೆ.

ಮೇ 1ರಂದು ಬೆಳಗ್ಗೆ 11.7ಕ್ಕೆ ‘ಪುಷ್ಪ ಪುಷ್ಪ’ ಸಾಂಗ್‌ ಬಿಡುಗಡೆಯಾಗಲಿದೆ. ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದಾರೆ.  ‘ಪುಷ್ಪ 2’ ಸಿನಿಮಾದ  ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡಲು ತಯಾರಿ ಆಗಿದೆ.

ತೆಲುಗಿನ ಜತೆ ಕನ್ನಡ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲೂ ಹಾಡುಗಳು ಸಿದ್ಧವಾಗುತ್ತಿವೆ. ಈ ಎಲ್ಲ ಭಾಷೆಯ ಆಡಿಯೊ ಹಕ್ಕುಗಳನ್ನು ಟಿ-ಸಿರೀಸ್​ ಸಂಸ್ಥೆ ಪಡೆದುಕೊಂಡಿದೆ. ಈ ಚಿತ್ರದ ಆಡಿಯೊ ಹಕ್ಕುಗಳು ಬರೋಬ್ಬರಿ 60 ಕೋಟಿ ರೂ .ಗೆ  ಮಾರಾಟವಾಗಿದೆ ಎಂದು ವರದಿಯಾಗಿದೆ. 2021ರಲ್ಲಿ ಬಿಡುಗಡೆ ಆದ ‘ಪುಷ್ಪ 1’ ಸಿನಿಮಾದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು.

ಪುಷ್ಪ 2 ಸಿನಿಮಾ ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.  ಅಲ್ಲು ಅರ್ಜುನ್  ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾಗಿನಿಂದ  ಸಿನಿಮಾದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ರಶ್ಮಿಕಾ ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು.

 ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!