For Regn Review : ಫ್ಯಾಮಿಲಿ ಪ್ಯಾಕೇಜ್ ‘ ಫಾರ್ ರಿಜಿಸ್ಟ್ರೇಷನ್’

ಚಿತ್ರ: ಫಾರ್ ರಿಜಿಸ್ಟ್ರೇಷನ್

ನಿರ್ದೇಶಕ: ನವೀನ್ ದ್ವಾರಕನಾಥ್
ನಿರ್ಮಾಪಕ: ನವೀನ್ ರಾವ್
ತಾರಾಗಣ: ಮಿಲನಾ ನಾಗರಾಜ್, ಪೃಥ್ವಿ ಅಂಬರ್, ರವಿಶಂಕರ್, ತಬಲ ನಾಣಿ ಇತರರು

ರೇಟಿಂಗ್: 3.5/5

ಪ್ರೀತಿಸಿ ಮದುವೆಯಾದ ಜೋಡಿಯ ನಡುವಣ ಸಂಬಂಧದ ಕಥೆಯ ಸಿನಿಮಾವೇ ಈ ವಾರ ಬಿಡುಗಡೆ ಆದ ‘ಫಾರ್ ರಿಜಿಸ್ಟ್ರೇಷನ್’.

ಪೋಷಕರಿಗೆ ತಿಳಿಸದೆ ಬೇರೆ ಮನೆಯಲ್ಲಿ ಇದ್ದುಕೊಂಡು ಮಿಲನಾ ನಾಗರಾಜ್ ಹಾಗು ಪೃಥ್ವಿ ಅಂಬರ್ ಗುಟ್ಟಾಗಿ ಮದುವೆ ಆಗುತ್ತಾರೆ. ಮದುವೆಯ ಗುಟ್ಟು ರಟ್ಟು ಆದಾಗ ಇಬ್ಬರಿಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ಮಾಡಲು ನಿರ್ಧಾರ ಮಾಡಲಾಗುತ್ತದೆ. ಅಲ್ಲಿಂದ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಫೋಟೋ ಒಂದು ವಿಲನ್ ಆಗಿ ಕಾಡುತ್ತದೆ. ಮುಂದೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.

ಚಿತ್ರದಲ್ಲಿ ಕುಟುಂಬದ ಕಥೆ ಇದೆ. ಗಂಡ ಹೆಂಡತಿ ನಡುವಿನ ಸಂಬಂಧವನ್ನು ಚಿತ್ರ ಹೇಳುತ್ತದೆ. ಮನರಂಜನೆಯ ಜೊತೆಗೆ ನಿರ್ದೇಶಕರು ಪ್ರೇಕ್ಷಕರಿಗೆಸಂದೇಶವನ್ನು ನೀಡುವ ಯತ್ನವನ್ನು ಮಾಡಿದ್ದಾರೆ.

ಮಿಲನಾ ನಾಗರಾಜ್ ಹಾಗೂ ಪೃಥ್ವಿ ಅಂಬರ್ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರಿಗೆ ಇಬ್ಬರ ನಟನೆ ಇಷ್ಟವಾಗುತ್ತದೆ. ಕಾಮಿಡಿ ಮೂಲಕ ತಬಲ ನಾಣಿ ಮಿಂಚಿದ್ದಾರೆ. ಲಾಯರ್ ಪಾತ್ರದ ಮೂಲಕ ರವಿಶಂಕರ್ ಗಮನ ಸೆಳೆಯುತ್ತಾರೆ. ಅವರು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಕೂಡ ನೀಡುತ್ತಾರೆ.

ಆಗಾಗ ಬರುವ ಹಾಡು, ಹೊಸತನ ಇಲ್ಲದ ಕಾಮಿಡಿಯ ನಡುವೆಯೂ ಒಟ್ಟಾರೆಯಾಗಿ ಚಿತ್ರ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!