ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ 44ನೇ ಹುಟ್ಟುಹಬ್ಬದ ವೇಳೆ ಅವರ ಮುಂದಿನ ಸಿನಿಮಾ ‘ವಾರಣಾಸಿ’ ಫಸ್ಟ್ ಲುಕ್ ನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಅನಾವರಣ ಮಾಡಿದ್ದಾರೆ.
ಮಂದಾಕಿನಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಚೋಪ್ರಾ ಅವರು ಕಪ್ಪು ಬಣ್ಣದ ಉಡುಪನ್ನು ಧರಿಸಿ ಕೂದಲನ್ನು ಕಟ್ಟಿಕೊಂಡಿರುವ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. “ನಗುವಾಗ ಲಾವಣ್ಯಮಯಿ, ನಗದಿದ್ದಾಗ ಉರಿಯುವ ಜ್ವಾಲೆ. ಮಂದಾಕಿನಿ.. ವಾರಣಾಸಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಎಂದು ಎಸ್ ಎಸ್ ರಾಜಮೌಳಿ ಅವರು ಬರೆದುಕೊಂಡಿದ್ದಾರೆ.
ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಈ ಚಿತ್ರ ಏಪ್ರಿಲ್ 7, 2027 ರಂದು ಬಿಡುಗಡೆಯಾಗಲಿದೆ. ಇದು ಕ್ರಿ.ಶ. 512ರ ಕಾಲಘಟ್ಟದ ಒಂದು ಸಮುದಾಯದ ಸುತ್ತ ಹೆಣೆಯಲಾದ ಕಥೆಯಾಗಿದ್ದು, ಆ ಸಮುದಾಯ ಜಗತ್ತನ್ನೇ ರಕ್ಷಿಸಬಲ್ಲ ಪ್ರಾಚೀನ ರಹಸ್ಯವೊಂದನ್ನು ಹೊಂದಿರುತ್ತದೆ.
ಕ್ರಿ.ಶ. 2027ರಲ್ಲಿ, ‘ಶಾಂಭವಿ’ ಎಂಬ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿ ಭೀಕರ ವಿನಾಶಕಾರಿ ಘಟನೆಯನ್ನು ಉಂಟುಮಾಡುತ್ತದೆ. ಇದೇ ಸಮಯದಲ್ಲಿ ಕುಂಭ ಎಂಬ ದುರಾಸೆಯ ವಿಜ್ಞಾನಿಯೊಬ್ಬ ಒಂದು ವಿಶೇಷ ಪುರಾತನ ವಸ್ತುವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವಾಗ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಇದೇ ಚಿತ್ರದ ಕಥೆಯಾಗಿದೆ.
ರಾಜಮೌಳಿ ಅವರ ಹಿಂದಿನ ಚಿತ್ರ ‘ಆರ್‌ಆರ್‌ಆರ್’ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದ ಎಂ.ಎಂ. ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಸಿನೆಸ್ ನಿರ್ಮಿಸುತ್ತಿವೆ.
—-





Be the first to comment